ವಾಮಂಜೂರು : ತುಳುನಾಡಿನ ಯುಗಪುರುಷರಾದ ಕೋಟಿಚೆನ್ನಯ್ಯರ ತಾಯಿಯಾದ ದೇಯಿ ಬೈದೆತಿಯವರ ಮೂರ್ತಿಗೆ ಮತಾಂಧನೋರ್ವ ಅಪಮಾನ ಎಸಗಿರುವುದನ್ನು ಖಂಡಿಸಿ ಬ್ರಹ್ಮಶ್ರೀ ನಾರಾಯಣಗುರು ಸಂಘ ವಾಮಂಜೂರು ವತಿಯಿಂದ ವಾಮಂಜೂರು ಜಂಕ್ಷನ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ತುಳುನಾಡಿನ ಇತಿಹಾಸದಲ್ಲೇ ದೇಯಿ ಬೈದೆತಿಗೆ ಮಹತ್ತರ ಸ್ಥಾನವಿದೆ ಅಂತಹಾ ಮಹಾನ್ ತಾಯಿಗೆ ನಡೆಸಿದ ಅಪಚಾರ ತೀವ್ರ ಖಂಡನಾರ್ಹ ಹಾಗೂ ಅಪಚಾರ ಎಸಗಿದ ಮತಾಂಧನಿಗೆ ತೀವ್ರ ಶಿಕ್ಷಯಾಗಬೇಕೆಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.
ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಸಮಸ್ತ ತುಳುವರಿಗೂ ಮಾತ್ರ್ ಸಮಾನಳು ಆಕೆಗಾದ ಅವಮಾನ ನಮ್ಮ ತಾಯಿಗಾದ ಅವಮಾನ ಇಂತಹ ವಿಕೃತ ಕೊನೆಗಾಣಬೇಕು ಮಾತ್ರವಲ್ಲ ಈಗಾಗಲೇ ಮಂಗಳೂರು ಪುರಭವನಕ್ಕೆ “ದೇಯಿ ಬೈದೆತಿ” ಹೆಸರಿಟ್ಟು ನಾಡಿನಲ್ಲಿ ಆಕೆಯ ಹೆಸರು ಚಿರಸ್ಥಾಯಿಯಾಗಿ ಉಳಿಸುವಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಗುರುಪುರ ಬಂಟ್ಸ್ ಸಂಘದ ಅಧ್ಯಕ್ಷ ರಾಜ್ಕುಮಾರ್ ಶೆಟ್ಟಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಜಗದೀಶ್ ಸೇಣವ, ಕಾರ್ಪೋರೇಟರ್ ಹೇಮಲತಾ ಸಾಲಿಯಾನ್, ಗೆಜ್ಜೆಗಿರಿ ಕ್ಷೇತ್ರದ ಕೋಶಾಧಿಕಾರಿ ದೀಪಕ್ ಕೊಟ್ಯಾನ್,ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ದಾಸ್ ಬಂಗೇರಾ, ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ, ಕೃಷ್ಣ ಕೋಟ್ಯಾನ್, ಪುರುಷೋತ್ತಮ್, ಮಹಿಳಾ ಅಧ್ಯಕ್ಷೆ ಜಯಂತಿ ದಾಮೋಧರ್, ಕಾಂತಪ್ಪ ಪೂಜಾರಿ, ಅನಿಲ್ ರಾಜ್, ರಾಜೇಶ್ ಕೊಟ್ಟಾರಿ. ಮೂಡುಶೆಡ್ಡೆ ಬಿಲ್ಲವ ಸಂಘದ ಅಧ್ಯಕ್ಷ ವಿಜಯ ಕುಮಾರ್ ಹಾಗೂ ಸತ್ತಿಕಲ್ ಬಿಲ್ಲವ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



