ಬೆಳ್ತಂಗಡಿಯ ಹೆರಾಜೆ ಮನೆತನದ ಜಗನ್ನಾಥ ಬಂಗೇರ ಇವರು ಅಸೌಖ್ಯದಿಂದ ಅ.31 ರಂದು ನಿಧನ ಹೊಂದಿದರು.
ಇವರು ಬೆಳ್ತಂಗಡಿಯ ಪ್ರತಿಷ್ಠಿತ ಹೆರಾಜೆ ಮನೆತನದ ದಿ/ ವೆಂಕಪ್ಪ ಪೂಜಾರಿ ಮತ್ತು ನೀಲಮ್ಮ ದಂಪತಿಯ 7ನೇ ಪುತ್ರನಾಗಿ ಜನಿಸಿದ ಜಗನ್ನಾಥ್ ಬಿ. ಹೆರಾಜೆಯವರು ಶಾಲಾ ವಿದ್ಯಾರ್ಥಿ ಜೀವನದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ, ಕೊಕ್ಕೊ, ಹೈಜಂಪ್, ವಾಲಿಬಾಲ್ ಮತ್ತು ಇತರ ಆಟೋಟ ಸ್ಪರ್ಥೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.