ಕೈಕಂಬ : ಕರ್ನಾಟಕ ಬ್ಯಾಂಕ್ ಮಿಲಿಟೆಡ್ಡಿನವರು ಗುರುಪುರ ವಜ್ರದೇಹಿ ಮಠದ ಅನಾಥ ಮಕ್ಕಳಿಗೆ ಪ್ರಯಾಣಿಸಲು ಕೊಡುಗೆಯಾಗಿ ಶಾಲಾ ಬಸ್ಸೊಂದು ನೀಡಿದ್ದು, ಅದರ ಕೀಲಿಕೈಯನ್ನು ಜ. 4ರಂದು ಸರಳ ಸಮಾರಂಭವೊಂದರಲ್ಲಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಗೆ ಬ್ಯಾಂಕ್ ಅಧ್ಯಕ್ಷ ಜಯರಾಮ ಭಟ್ ಪೊಳಲಿ ಹಸ್ತಾಂತರಿಸಿದರು.gur-jan-5-vajradehi bus-1

gur-jan-5-vajradehi bus-2

ಕಳೆದ ವರ್ಷ ಸ್ವಾಮೀಜಿಗಳೊಂದಿಗೆ ನಡೆಸಲಾದ ಮಾತುಕತೆಯಂತೆ ಬ್ಯಾಂಕ್ ವತಿಯಿಂದ ಈ ವರ್ಷ ಬಸ್ ಕೊಡುಗೆಯಾಗಿ ನೀಡುತ್ತಿದ್ದೇವೆ ಎಂದು ಭಟ್ ತಿಳಿಸಿದರು. ಮಠದಲ್ಲಿ ಒಟ್ಟು 15 ಅನಾಥ ಮಕ್ಕಳಿದ್ದು, ಅವರೆಲ್ಲರೂ ಸ್ಥಳೀಯ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಸಮಾರಂಭದಲ್ಲಿ ಸ್ವಾಮಿಯೊಂದಿಗೆ ಜಯರಾಮ ಭಟ್, ಅರುಣ್ ಭಟ್ ಖಂಡಿಗೆ, ಅದಾನಿ ಗ್ರೂಪಿನ ಅಧಿಕಾರಿ ಕಿಶೋರ್ ಆಳ್ವ, ಮಠದ ಶಾಲಾ ಮಕ್ಕಳು ಹಾಗೂ ಇತರರಿದ್ದಾರೆ. ಬಸ್ ಹಸ್ತಾಂತರಿಸಿದ ಬಳಿಕ ಸ್ವಾಮಿಗಳು ಹಾಗೂ ಅತಿಥಿಗಳು ಬಸ್ಸಿನೊಳಗೆ ಕುಳಿತರೆ, ಚಾಲಕ ಚಲಾಯಿಸಿದರು.

By suddi9

Leave a Reply

Your email address will not be published. Required fields are marked *