45548

ಹುಬ್ಬಳ್ಳಿ: ಮಹಿಳೆಯೋರ್ವರಿಗೆ ಆಕಸ್ಮಿಕ ವಿದ್ಯುತ್  ತಗುಲಿ ಮರತಪಟ್ಟಿರುವ ದಾರುಣ ಘಟನೆ  ನಗರದ ನಾರಾಯಣ ಪೇಟ್‌‌‌ನಲ್ಲಿ ಬುಧವಾರ ನಡೆದಿದೆ.

ನಾರಾಯಣ ಪೇಟ್‌‌‌ ನಿವಾಸಿ ಸರಸ್ವತಿ ಶಿವಾನಂದ ಪಾಟೀಲ್‌(30) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಸರಸ್ವತಿ ಅವರು ತನ್ನ ಮನೆ ಎದುರಿನ ನಳ್ಳಿಯೊಂದರಲ್ಲಿ ನೀರು ತುಂಬುತ್ತಿದ್ದ ವೇಳೆ ಹತ್ತಿರವಿದ್ದ

ವಿದ್ಯುತ್ ಕಂಬವನ್ನು ಮುಟ್ಟಿದ್ದಾಗ ವಿದ್ಯುತ್ ತಗುಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

By suddi9

Leave a Reply

Your email address will not be published. Required fields are marked *