news-14-helmet1976718860

ಬೆಂಗಳೂರು: ಅರ್ಧ ಹೆಲ್ಮೆಟ್ ವಿರುದ್ಧ ಸೂಕ್ತ ಕ್ರಮ ಮತ್ತು ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಇದೀಗ ಹೆಲ್ಮೆಟ್‌ಗಳಲ್ಲಿ ಐಎಸ್‌ಐ ಮಾರ್ಕ್ ಕಡ್ಡಾಯಗೊಳಿಸಿದ್ದಾರೆ.

ಫೆ.1ರಿಂದ ಎಲ್ಲಾ ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್‌ಗಳಲ್ಲಿ ಐಎಸ್‌ಐ ಮಾಕ್ ಇರಬೇಕು, ಇಲ್ಲವಾದರೆ ದಂಡ ವಿಧಿಸಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಗುಣಮಟ್ಟದ ಯಾವುದೇ ಹೆಲ್ಮೆಟ್‌ಗಳನ್ನು ಸವಾರರು ಬಳಸಬಹುದು ಎಂದು ಪೊಲೀಸ್ ಇಲಾಖೆ ಹೇಳಿತ್ತು. ಆದರೆ ಇದೀಗ ಹೆಲ್ಮೆಟ್‌ಗಳಲ್ಲಿ ಐಎಸ್‌ಐ ಮಾರ್ಕ್ ಇರುವುದು ಕಡ್ಡಾಯ ಎಂದಿದೆ.

 

By suddi9

Leave a Reply

Your email address will not be published. Required fields are marked *