ಪೊಳಲಿ: ಧರ್ಮಶಾಸ್ತ್ರ ಭಜನಾ ಮಂದಿರ ವತಿಯಿಂದ ಫೆ.8ರಿಂದ 10ನೇ ವರ್ಷದ “ಭಜನಾ ಸಂಕೀರ್ತನೆ” ಹಾಗೂ ಫೆ.10ರಂದು ಸಭಾ ಕಾರ್ಯಕ್ರಮ ಇಲ್ಲಿನ ಸಾಣೂರು ಪದವುನಲ್ಲಿ ಆಯೋಜಿಸಲಾಗಿದೆ.

ಫೆ.10ರಂದು ಬೆಳಗ್ಗೆ 8ರಿಂದ “ಶನೀಶ್ವರ ಕಥಾವ್ರತ ಪೂಜೆ” ಮಹಾ ಪೂಜೆ ಹಾಗೂ ಅನ್ನಸಂತರ್ಪಣೆ ಆಯೋಜಿಸಿದ್ದು, ರಾತ್ರಿ 9ಕ್ಕೆ ರಕ್ತೇಶ್ವರಿ ದೇವಿಯ ನೇಮೋತ್ಸವ ಮತ್ತು ಅನ್ನಸಂತರ್ಪಣೆ ನೆರವೇರಲಿದೆ.

ಮಧ್ಯಾಹ್ನ 12ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಮಲ್ಲಿಕಾ ಆಗ್ರೋ ಆಯಿಲ್ಸ್ ಮಾಲಕ ಪಿ.ಜಯರಾಮ ಕೃಷ್ಣ ಪೊಳಲಿ ವಹಿಸಲಿದ್ದಾರೆ. ರಾಮ ಕೃಷ್ಣ ತಪೋವನದ ವಿವೇಕ ಚೈತನ್ಯನಂದ ಸ್ವಾಮೀಜಿ ಆಶೀರ್ವಚನ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಉಪಸ್ಥಿತರಿರುವರು.

ಅತಿಥಿಗಳಾಗಿ ತುಂಬೆ ಜಿ.ಪಂ.ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆಗುತ್ತು, ತಾ.ಪಂ. ಸದಸ್ಯ ಯಶವಂತ ಕೋಟ್ಯಾನ್ ಪೊಳಲಿ, ಗ್ರಾ.ಪಂ.ಅಧ್ಯಕ್ಷೆ ಚಂದ್ರವತಿ ಪೊಳಲಿ, ಗ್ರಾ.ಪಂ. ಸದಸ್ಯೆ ವೀಣಾ ಆಚಾರ್ಯ ಪೊಳಲಿ, ಕುಶಾಲ್ ಇಂಡಸ್ಟ್ರೀಸ್ ಮಾಲಕರಾದ ಜನಾರ್ಧನ ಶೆಟ್ಟಿ  , ಜ್ಯೋತಿಷ್ಯ ನಾಗರಾಜ್ ಪಂಡಿತ್, ಪೊಳಲಿ ಅರ್ಥ್ ಮೂವರ್ಸ್ ಮಾಳಕ ಶಿವಪ್ರಸಾದ್ ಸೊಲ್ತಾಡಿ ಭಾಗವಹಿಸಲಿದ್ದಾರೆ.

 ಈ ಸಂದರ್ಭದಲ್ಲಿ ಸಾಣೂರು ಹಿರಿಯ ನಾಗರಿಕ ಶಂಕರ ಪೂಜಾರಿ, ಜನಾರ್ಧನ ಪೂಜಾರಿ ಸಾಣೂರು, ಸತೀಶ್ ಪೂಂಜ ಹಾಗೂ ವಿಶ್ವನಾಥ ಪೂಜಾರಿ ಸಾಣೂರು ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *