ಕೈಕಂಬ: ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಜಾತ್ರಾ ಮಹೋತ್ಸವ ಸಂದರ್ಭ ಪುಂಜಾಲ್ ಕಟ್ಟೆ ತಾಂಬೂಲ ಕಲಾವಿದೆರ್ ತಂಡದ 100 ನೇ ನಾಟಕ ಪ್ರಯೋಗದ ಯಶಸ್ವಿ ಕಲಾವಿದೆ ನಿಧಿಶಾ ಎನ್ ಶೆಟ್ಟಿ ಇವರನ್ನು ದೇವಳದ ಆಡಳಿತ ಮಂಡಳಿ ಹಾಗೂ ಊರ ಕಲಾಭಿಮಾನಿಗಳ ಸಹಕಾರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಲಾವಿದರಾದ ಗುಂಡೂರಿ ರವೀಂದ್ರ ಬಿ. ಸಾಲಿಯಾನ್,ಪೆರಿಂಜೆ ಹೇಮಂತ್ ಕುಮಾರ್ ಭಟ್, ಗುರುರಾಜ್ ಪಿ. ಕುಕ್ಕಿಪಾಡಿ, ಫೊಟೋಗ್ರಾಫರ್ ಅಸೋಶಿಯನ್ ಸಂಘದ ಅಧ್ಯಕ್ಷ ಸಂತೋಷ್ ಇಂಚರ, ನಿತ್ಯಾನಂದ ಶೆಟ್ಟಿ, ಸುರೇಶ್ ಪಾಲಡ್ಕ, ವಸಂತ ಗುಣನಿಲ ಮತ್ತಿತರರು ಉಪಸ್ಥಿತರಿದ್ದರು.

Congratulations Nidhisha… God bless you