
ಚಿಕ್ಕೋಡಿ: ಶಾಸಕ ಉಮೇಶ ಕತ್ತಿ ಬೆಂಬಲಿಗರು ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹುಕ್ಕೇರಿ ತಾಲೂಕಿನ ಎಲಿಮನ್ನೋಳಿ ಗ್ರಾಮದ ಭರತೇಶ (27) ಎಂಬಾತ ಹಲ್ಲೆಗೊಳಗಾದ ಯುವಕ. ಶಾಸಕ ಉಮೇಶ ಕತ್ತಿ ಬೆಂಬಲಿಗರಾದ ಗ್ರಾ.ಪಂ ಸದಸ್ಯ ಸತೀಶ ಮಗ್ಗೆನ್ನವರ ಸೇರಿದಂತೆ 20 ಕ್ಕೂ ಹೆಚ್ಚು ಜನರು ಭರತೇಶ ಮೇಲೆ ಕಬ್ಬಿಣದ ರ್ಆಡ್ ಹಾಗೂ ಕಟ್ಟಿಗೆಗಳಿಂದ ಹಲ್ಲೆ ಮಾಡಿದ್ದಾರೆ.
ಗಾಯಗೊಂಡ ಭರತೇಶನನ್ನು ಹುಕ್ಕೇರಿ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.