
ಬೆಂಗಳೂರು: ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ನಟಿ ಸಿಂಧು ಮೆನನ್ ಸೇರಿ ಅವರ ಕುಟುಂಬಸ್ಥರ ಮೇಲೂ ಬೆಂಗಳೂರಿನ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಂಧು ಮೆನನ್ ಹಾಗೂ ಕುಟುಂಬಸ್ಥರು ನಕಲಿ ದಾಖಲೆ ಸೃಷ್ಠಿಸಿ ಕಾರು ಖರೀದಿಗೆ 36 ಲಕ್ಷ ರೂ. ಬರೋಡಾ ಬ್ಯಾಂಕ್ನಿಂದ ಸಾಲ ಪಡೆದು ವಂಚಿಸಿದ್ದಾರೆ ಎಂದು ಬರೋಡಾ ಬ್ಯಾಂಕ ಮ್ಯಾನೇಜರ್ ರಮೇಶ್ ದೂರು ನೀಡಿದ್ದಾರೆ.
ವಿಚಾರಣೆ ವೇಳೆ ಸಿಂಧು ಮೆನನ್ ಅವರು ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆದಿರುವ ಸಾಬೀತಾಗಿದೆ. ಸದ್ಯ ಅಮೇರಿಕದಲ್ಲಿ ವಾಸವಾಗಿರುವ ಸಿಂಧು ಮೆನನ್ ಪ್ರಕರಣದ ಮೂರನೇ ಆರೋಪಿಯಾಗಿದ್ದು, ಐಪಿಸಿ ಸೆಕ್ಷನ್ 420ರ ಅಡಿ ಬಂಧನ ಭೀತಿ ಎದುರಾಗಿದೆ.
ಸಿಂಧು ಮೆನನ್, ಅವರ ಸಹೋದರ ಮನೋಜ್ ಕಾರ್ತಿಕೆನ್, ನಾಗಶ್ರೀ, ಶಿವಣ್ಣ, ಸುಧಾ ರಾಜಶೇಖರ್ವಿರುದ್ದ ವಂಚನೆ ಪ್ರಕರಣದಡಿ ಪೊಲೀಸರು ಎಫ್ ಆರ್ ಐ ದಾಖಲಿಸಿದ್ದಾರೆ.
ಆರ್ಎಂಸಿ ಯಾರ್ಡ್ ಪೊಲೀಸರು ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಿಂಧು ಮೆನನ್ ಕನ್ನಡದ ಖುಷಿ, ನಂದಿ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದರು.