ಬಂಟ್ವಾಳ: ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಧನುಪೂಜೆ ನಾಗಶ್ರೀ ಮಿತ್ರವೃಂದ ಇದರ ನೂತನವಾಗಿ ನಿರ್ಮಿಸಿರುವ ವಿವೇಕ ಭವನ ಉದ್ಘಾಟನಾ ಸಮಾರಂಭವು ಮಾ.25ರಂದು ಕೈಕಂಬದಲ್ಲಿ ನಡೆಯಲಿದೆ.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯಾನಂದ ಆಶೀರ್ವಚನ ನೀಡಲಿದ್ದು, ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಂಘ ಚಾಲಕ ಕಾಂತಪ್ಪ ಶೆಟ್ಟಿ ಕೊಡ್ಮಾಣ್, ಸತ್ಯಜಿತ್ ಸುರತ್ಕಲ್, ಪದ್ಮನಾಭ ಕೊಟ್ಟಾರಿ, ಜಿತೇಂದ್ರಕೊಟ್ಟಾರಿ, ವೆಂಕಟೇಶ್ ನಾವಡ, ವಜ್ರನಾಥ ಕಲ್ಲಡ್ಕ, ಉಸ್ಮಾನ್ ಡಿ., ಅರುಣು ಪುತ್ತಿಲ, ಶರಣ್ ಪಂಪ್ ವೆಲ್, ಜಗದೀಶ್ ಶೇಣವ, ರಾದಕೃಷ್ಣ ಅಡ್ಯಂತಾಯ, ರವಿರಾಜ್ ಬಿ.ಸಿ.ರೋಡು, ವೀರಪ್ಪ ಮೂಡುಶೆಡ್ಡೆ, ರಘು ಎಲ್ ಶೆಟ್ಟಿ, ಚಂದ್ರಶೇಖರ ಅಜಿಲ, ರಮೇಶ್ ಬೆಂಜನಪದವು, ಜಯಂತಿ ಎಸ್ ಬಟ್ಟಾಜೆ, ನವೀನ ಭಂಡಾರಿ, ಉಧ್ಯಮಿಗಳಾದ ನಾರಾಯಣ ಪಿ.ಪಿ. ಕಮ್ಮಾಜೆ, ಗಂಗಾಧರ ಪೂಜಾರಿ ಕೊಪ್ಪಲ, ಉಮೇಶ್ ಬೆಲ್ಚಡ, ನವೀನ್ ಕೋಟ್ಯಾನ್ , ಪಿ.ಡಬ್ಲ್ಯೋ ಡಿ.ಗುತ್ತಿಗೆದಾರ ಯಶೋಧರ ಪೊಳಲಿ, ರೂಪಾ ನಾರಾಯಣ ನಾಯ್ಕ ಮತ್ತಿತರರು ಭಾಗವಹಿಸಲಿದ್ದಾರೆ.
ಈ ವೇಳೆ ದುರ್ಗಾವಾಹಿನಿಯ ಜಿಲ್ಲಾ ಸಂಚಾಲಕಿ ವಕೀಲೆ ವಿದ್ಯಾಮಲ್ಯ ಧಾರ್ಮಿಕ ಉಪನ್ಯಾಸವನ್ನು ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.