5620f0257e87d9d6731249db5c11b3ce

ಚಿಕ್ಕಬಳ್ಳಾಪುರ: ನವಜಾತ ಗಂಡು ಶಿಶುವನ್ನು ಜೀವಂತವಾಗಿ ಹೂತು ಹಾಕಿದ ಅಮಾನವೀಯ ಘಟನೆ ಚಿಂತಾಮಣಿ ತಾಲೂಕಿನ ಗಡದಾಸನ ಹಳ್ಳಿಯಲ್ಲಿ

ನಡೆದಿದೆ.

ಗ್ರಾಮದ ಹೊರವಲಯದ ರೇಷ್ಮೆ ತೋಟವೊಂದರಲ್ಲಿ ನವಜಾತು ಗಂಡು ಶಿಶು ಮಣ್ಣಿನಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರೇಷ್ಮೆ ತೋಟದಲ್ಲಿ ಕಾಗೆಗಳ ಹಾರಾಟ-ಚೀರಾಟ ಕಂಡ ಸ್ಥಳೀಯರು ಸ್ಥಳಕ್ಕೆ ಹೋಗಿ ನೋಡಿದಾಗ ಮಣ್ಣಿನಲ್ಲಿ ಹೂತು ಹಾಕಲಾಗಿದ್ದ ಮಗು ಪತ್ತೆಯಾಗಿದೆ. ಇನ್ನು ಅವಧಿಗೂ ಮುನ್ನ ಮಗು ಜನನವಾಗಿರುವುದಕ್ಕೆ ಅಥವಾ ಅನೈತಿಕ ಸಂಬಂಧದಿಂದ ಜನಿಸಿದೆ ಎಂದು ಮಗುವನ್ನ ಮಣ್ಣಿನಲ್ಲಿ ಹೂತು ಹಾಕಿರಬಹುದು ಅಂತ ಸ್ಥಳೀಯ ಗ್ರಾಮಸ್ಥರು ಹೇಳುತ್ತಿದ್ದಾರೆ.

ಕೂಡಲೇ ಮಾಹಿತಿ ತಿಳಿದ ಸ್ಥಳೀಯ ಕುರುಬೂರು ಪ್ರಾಥಮಿಕ ಚಿಕಿತ್ಸಾ ಕೇಂದ್ರದ ವೈದ್ಯೆ ಪೂರ್ಣಿಮಾ, ಸ್ಥಳೀಯ ಆಶಾ ಕಾರ್ಯಕರ್ತೆಯ ಸಹಾಯದಿಂದ ಮಗುವನ್ನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಆರೈಕೆ ನೀಡಿದ್ದಾರೆ. ಸದ್ಯ ಸಿಕ್ಕಿರುವ ಮಗುವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಎನ್‍ಐಸಿಯು ಘಟಕಕ್ಕೆ ರವಾನಿಸಲಾಗಿದ ಎನ್ನಲಾಗಿದೆ.

ಇನ್ನು ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *