3232

ಹುಬ್ಬಳ್ಳಿ: ಆಸ್ತಿ ವಿವಾದ ಹಿನ್ನಲೆ ಒಡಹುಟ್ಟಿದ ಸಹೋದರನನ್ನೇ  ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಗೋಪನಕೊಪ್ಪದ ಕಲ್ಮೇಶ್ವರ ಮಠದ ಬಳಿ ಗುರುವಾರ ನಡೆದಿದೆ.‌

ನಿಂಗಯ್ಯ ಕನ್ನೂರ ಕೊಲೆಯಾಗಿರುವ ವ್ಯಕ್ತಿಯಾಗಿದ್ದು ಸಹೋದರ ಕಲ್ಲಯ್ಯ ಕನ್ನೂರ ಹತ್ಯೆ ಮಾಡಿದ ಆರೋಪಿ. ಆಸ್ತಿ ವಿವಾದದ ಹಿನ್ನಲೆಯಲ್ಲಿ ಪರಸ್ಪರ ಇಬ್ಬರ ನಡುವೆ ಜಗಳವಾಗುತ್ತಿತ್ತು. ಇಂತಹ ಜಗಳ ಇಂದು ವಿಕೋಪಕ್ಕೆ ತಿರುಗಿ ಇಂದು ಮುಂಜಾನೆ ಹಿರಿಯ ಸಹೋದರ ನಿಂಗಯ್ಯನನ್ನು  ಕಿರಿಯ ಸಹೋದರ ಕಲ್ಲಯ್ಯ ಕೊಚ್ಚಿ ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಅಶೋಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By suddi9

Leave a Reply

Your email address will not be published. Required fields are marked *