ಸುದ್ದಿ9 ಕೈಕಂಬ: ಸಮಾಜದಲ್ಲಿ ನಡೆಯುಂತಹ ಕೌಟುಂಬಿಕ ದೌರ್ಜನ್ಯ ಮಹಿಳೆಯರ ಮೇಲೆ ಆಗುತ್ತಿರುವಂತಹ ದೌರ್ಜನ್ಯ ಅತ್ಯಾಚಾರಗಳನ್ನು ಸ್ವತ ಮಹಿಳೆಯರೇ ಎದುರಿಸಬೇಕು ಎಂದು ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ನ ಈಆರ್ಡಬ್ಲ್ಯುಸಿ ಯೋಜನೆಯ ಸಂಯೋಜಕರಾದ ವಿಲೀಯಂ ಪಿಂಟೋರವರು ಹೇಳಿದರು.

21 vp thrabethi 2

21 vp tharabethi 1
ಅವರು ಆ.21ರಂದು ಬಜ್ಪೆ ಗ್ರಾಮದ ಸಮೂದಾಯದ ಮಹಿಳೆಯರಿಗೆ ಮಹಿಳಾ ಹಕ್ಕುಗಳು ಮತ್ತು ಕೌಟುಂಬಿಕ ದೌರ್ಜನ್ಯ ತಡೆಕಾಯಿದೆಯ ಬಗೆಗಿನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮಹಿಳೆಯರಲ್ಲಿಯೂ ಸ್ವ-ರಕ್ಷಣೆಯ ಸಾಮಥ್ರ್ಯ ಇದೆ. ಆದರೆ ಪುರುಷ ವ್ಯವಸ್ಥೆಯ ಆಶಕ್ತಿ ಕಾಣದಂತಾಗಿದೆ. ಇಂತಹ ತರಬೇತಿಗಳ ಮೂಲಕ ಆ ಶಕ್ತಿಯನ್ನು ಹೊರತೆಗೆಯಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಇದಕ್ಕೆ ಪೂರಕವಾಗಿ ತರಬೇತಿಯನ್ನು ಬ್ರೇಕ್ ಥ್ರೂ ಸಂಸ್ಥೆಯ ಸಂಪನ್ಮೂಲವ್ಯಕ್ತಿ ಭರತ್ಎಸ್. ಕರ್ಕೇರ ನಡೆಸಿಕೊಟ್ಟರು.  ಈ ತರಬೇತಿಯು ನಿರಂತರವಾಗಿ ನಡೆಯುತ್ತಿದ್ದು ಪ್ರಾರಂಭಿಕ ಹಂತವಾಗಿ ನಾಯಕತ್ವ ತರಬೇತಿ ಮತ್ತು ದೌರ್ಜನ್ಯಗಳನ್ನು ಗುರುತಿಸುವುದು ಮತ್ತು ಹೇಗೆ ಎದುರಿಸಬೇಕು ಎಂಬ ಬಗ್ಗೆ ತರಬೇತಿ ನೀಡಲಾಯಿತು . ತರಬೇತಿಯನ್ನು ಬ್ರೇಕ್ಥ್ರೂ ಸಂಸ್ಥೆಯ ತರಬೇತುದಾರರಾದ ಭರತ್ ಎಸ್ ಕರ್ಕೇರವರು ನಡೆಸಿಕೊಟ್ಟರು ರೇಶ್ಮಾ ಸ್ವಾಗತಿಸಿದರು. ಫಾಲಾಕ್ಷೀ, ದಿನೇಶ್, ಸೀತಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *