3e3e8b4f-ee1a-4d1f-841b-6d8104078cae

ತೋಡಾರು: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಟ ಮಾಡುತ್ತಿದ್ದ ವೇಳೆ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ ಘಟನೆ ಇಲ್ಲಿನ  ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಒಳ ರಸ್ತೆಯ ಬಳಿ  ನಡೆದಿದೆ.

ಬಂಧಿತರನ್ನು ಅಡ್ಡೂರಿನ ನಿವಾಸಿಗಳಾದ ಸಿದ್ದೀಕ್,  ಸಿನನ್ ಹಾಗೂ ಅಲಂಗಾರಿನ ಕರುಣಾಕರ ಬಂಧಿತ ಆರೋಪಿಗಳ

ಆರೋಪಿ ಕರುಣಾಕರ ಅಲಂಗಾರು ಪರಿಸರದಲ್ಲಿ ಈ ಜಾನುವಾರುಗಳನ್ನು ತಂದು ಕಟ್ಟಿ ಹಾಕಿದ್ದು, ಅಲ್ಲಿಂದ ಅಕ್ರಮವಾಗಿ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಠಾಣಾಧಿಕಾರಿ ದೇಜಪ್ಪ ಹಾಗೂ ಸಿಬ್ಬಂದಿ ತೋಡಾರು ಬಳಿ ವಾಹನವನ್ನು ತಡೆದು ನಿಲ್ಲಿಸಿ, ತಪಾಸಣೆ ನಡೆಸಿದಾಗ ಅಕ್ರಮ ಗೋ ಸಾಗಾಟ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *