BTW_APL5_1

ಬಂಟ್ವಾಳ: ಸಜೀಪ ಮಾಗಣೆಯ ಸಜೀಪಗುತ್ತು ಕುಟುಂಬಸ್ಥರ ಶ್ರೀ ನಾಲ್ಕೈತ್ತಾಯ ದೈವದ ಧರ್ಮನೇಮೋತ್ಸವ  ಮತ್ತು ಪರಿವಾರ ದೈವಗಳಿಗೆ ಕೋಲ ಸೇವೆ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು.

ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ಪೌರೋಹಿತ್ಯದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದು ಬುಧವಾರ  ಮುಂಜಾನೆ ನಾಲ್ಕೈತಾಯ ದೈವದ ಭಂಡಾರ ಬಂದು ರಾತ್ರಿ  ಧರ್ಮ ನೇಮ ನಡೆಯಿತು.

ಪರಿವಾರ ದೈವಗಳಾದ ಕಲ್ಲುರ್ಟಿ- ಪಂಜುರ್ಲಿ ದೈವ ಹಾಗೂ ಕೊರತಿ ದೈವಕ್ಕೆ ಕೋಲ ಸೇವೆ ನೆರವೇರಿತು.  ಮಧ್ಯಾಹ್ನ  ಮಹಾ ಅನ್ನಸಂತರ್ಪಣೆ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಗಂಧ ಪ್ರಸಾದ ಸ್ವೀಕರಿಸಿದರು. ಸಜೀಪಗುತ್ತು ಗಡಿಪ್ರಧಾನ ಕೋಚು ಭಂಡಾರಿ ಯಾನೆ ಮುಂಡಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *