ಪೊಳಲಿ: ಇಲ್ಲಿನ ರಾಮಕೃಷ್ಣ ತಪೋವನದಲ್ಲಿ ಎ.16ರಿಂದ 22ರವರೆಗೆ 10ವರ್ಷದಿಂದ 18 ವಯಸ್ಸಿನವರೆಗೆ ಒಳಪಟ್ಟ ಮಕ್ಕಳಿಗೆ ಉಚಿತ ಬೇಸಿಗೆಯ “ಮಕ್ಕಳ ಚೈತನ್ಯ ಶಿಬಿರ” ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಮಕ್ಕಳಿಗೆ ಶಾಸ್ತ್ರೀಯ ಸಂಗೀತ, ವ್ಯಕ್ತಿತ್ವ ವಿಕಸನ, ಸ್ವಚ್ಛ ಅಭಿಯಾನ ಹಾಗೂ ರಾಷ್ಟ್ರ ಪ್ರೇಮೆ ಮತ್ತಿತರ ಕ್ರೀಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಮಕ್ಕಳು ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಕಟನೆ ತಿಳಿಸಿದೆ.
