05:04 PM: ರಾಜ್ಯಪಾಲರು ರಾಜೀನಾಮೆ ಕೊಡಬೇಕೆ ಬೇಡವೇ ಅನ್ನೋದು ಬೇರೆ ಪ್ರಶ್ನೆ. ಆದರೆ, ಈ ದೇಶದ ಯಾವುದೇ ಸಂವಿಧಾನ್ಮಕ ಸಂಸ್ಥೆ ಆರ್ಎಸ್ಎಸ್ ದಬ್ಬಾಳಿಕೆಗೆ ಹೊರತಾಗಿಲ್ಲ. ರಾಜ್ಯಪಾಲರಿಗೆ ಕರ್ನಾಟಕದಲ್ಲಿ ಬೇರೆ ಯಾವ ಆಯ್ಕೆಯೂ ಇರಲಿಲ್ಲ.-ರಾಹುಲ್ ಗಾಂಧಿ
05:03 PM: ಈ ದೇಶದ ಎಲ್ಲ ಸಂಸ್ಥೆಗಳನ್ನು ನಿಯಂತ್ರಿಸಬೇಕು ಎನ್ನುವುದು ಆರ್ಎಸ್ಎಸ್ನ ಉದ್ದೇಶ. ಎಲ್ಲರಿಗೂ ಉಸಿರುಕಟ್ಟಿದ ಅನುಭವ ಆಗುತ್ತಿದೆ. ಬಿಜೆಪಿಯ ಸಂಸದರ ಮೇಲೆಯೂ ದಬ್ಬಾಳಿಕೆ ನಡೆಯುತ್ತಿದೆ -ರಾಹುಲ್ ಗಾಂಧಿ
05:02 PM: ಪ್ರಧಾನಿ ಒಬ್ಬ ಪ್ರಜಾಪ್ರಭುತ್ವ ಸರ್ಕಾರದ ನಾಯಕನಂತೆ ನಡೆದುಕೊಳ್ತಿಲ್ಲ. ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಅದು ಸುಪ್ರಿಂ ಕೋರ್ಟ್ ಸೇರಿದಂತೆ ಎಲ್ಲರಿಗೂ ಗೊತ್ತಿದೆ -ರಾಹುಲ್ ಗಾಂಧಿ
05:02 PM: ಬಿಜೆಪಿ ಶೇ 100ರಷ್ಟು ಎಲ್ಲ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದೆ. ಮಾಧ್ಯಮಗಳೂ ಬಿಜೆಪಿಯ ದಾಳಿಯಿಂದ ಹೊರತಾಗಿಲ್ಲ. ಕೆಲವು ಮಾಧ್ಯಮಗಳು ಅದನ್ನು ಎದುರಿಸಿ ನಿಂತಿವೆ – ರಾಹುಲ್ ಗಾಂಧಿ
05:01 PM: ನಾವೆಲ್ಲರೂ ಸೇರಿ ಬಿಜೆಪಿಯನ್ನು ಈ ದೇಶದಲ್ಲಿ ಸೋಲಿಸಬೇಕಿದೆ. ಕರ್ನಾಟಕದ ಫಲಿತಾಂಶ ಮತ್ತು ಬೆಳವಣಿಗೆಗಳ ಅರ್ಥ ಇದು -ರಾಹುಲ್ ಗಾಂಧಿ
05:00 PM: ನಾವು ದೇಶದ ಎಲ್ಲ ಕಡೆಯೂ ಜನರ ದನಿ ರಕ್ಷಿಸಲು ಯತ್ನಿಸ್ತೀವಿ. ಬಿಜೆಪಿ ಪ್ರಜಾಪ್ರಭುತ್ವ, ಸುಪ್ರೀಂಕೋರ್ಟ್ ಮೇಲೆ ಆಕ್ರಮಣ ಮಾಡಲು ಯತ್ನಿಸ್ತಿದೆ -ರಾಹುಲ್ ಗಾಂಧಿ
04:59 PM: ನಾವು ಕರ್ನಾಟಕ ಜನರ ಅಭಿಪ್ರಾಯವನ್ನು ಕಾಪಾಡಿದ್ದೇವೆ. ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೆ ಬೇರೆ ಮಾತು. ಅವರಿಗೆ ಬಹುಮತ ಇಲ್ಲ. ಜೆಡಿಎಸ್ ಮತ್ತು ನಮ್ಮ ಶಾಸಕರು ಸೇರಿ ಸರ್ಕಾರ ಮಾಡ್ತೀವಿ -ರಾಹುಲ್ ಗಾಂಧಿ
04:59 PM: ನಾನು ಈ ದೇಶದ ಜನರಿಂದ ಆಯ್ಕೆಯಾಗಿದ್ದೇನೆ ಎನ್ನುವುದನ್ನು ಪ್ರಧಾನಿ ಅರ್ಥಮಾಡಿಕೊಳ್ಳಬೇಕು. ಆರ್ಎಸ್ಎಸ್ ಬಿಟ್ಟು ಬೇರೆ ಯಾವುದೇ ಸಂಸ್ಥೆಗೆ ಅವರು ಗೌರವ ಕೊಡ್ತಿಲ್ಲ. ಈಗ ಜನರು ಅವರಿಗೆ ಪಾಠ ಕಲಿಸಿದ್ದಾರೆ -ರಾಹುಲ್ ಗಾಂಧಿ
04:58 PM: ದೇಶದ ಜನರ ದನಿಯನ್ನು ನಾವು ಕಾಪಾಡ್ತೀವಿ. ಪ್ರಧಾನಿ ಈ ದೇಶಕ್ಕಿಂತ, ಈ ದೇಶದ ಜನರಿಗಿಂತ, ಸುಪ್ರೀಂಕೋರ್ಟ್ಗಿಂತ, ಸಂಸತ್ತಿಗಿಂತ ದೊಡ್ಡವರಲ್ಲ. ಇದನ್ನು ಪ್ರಧಾನಿ ಅರ್ಥ ಮಾಡಿಕೊಳ್ಳಬೇಕು -ರಾಹುಲ್ ಗಾಂಧಿ
04:55 PM: ಮಾತನಾಡುವಾಗ ಪ್ರಧಾನಿ ತಾನು ಭ್ರಷ್ಟಾಚಾರದ ವಿರುದ್ಧ ಅಂತ ಹೇಳ್ತಾರೆ. ವಾಸ್ತವವಾಗಿ ಅವರು ಭ್ರಷ್ಟಾಚಾರಕ್ಕೆ ಪ್ರೇರಣೆಯಾಗಿದ್ದಾರೆ. ಕರ್ನಾಟಕದಲ್ಲಿ ನಡೆದ ಶಾಸಕರ ಖರೀದಿ ಪ್ರಯತ್ನಕ್ಕೆ ದೆಹಲಿಯಿಂದ ಅನುಮೋದನೆ ಸಿಕ್ಕಿತ್ತು -ರಾಹುಲ್ ಗಾಂಧಿ
04:54 PM: ಈ ದೇಶದ ಶಾಸನಬದ್ಧ ಸಂಸ್ಥೆಗಳು ಎಲ್ಲರಿಗಿಂತ ದೊಡ್ಡವು ಎಂಬುದನ್ನು ಕರ್ನಾಟಕ ನಿರೂಪಿಸಿದೆ. ಪ್ರಧಾನಿ ನೇರವಾಗಿ ಕಾಂಗ್ರೆಸ್ ಮತ್ತು ಶಾಸಕರ ಖರೀದಿಗೆ ಬಹಿರಂಗ ಒಪ್ಪಿಗೆ ನೀಡಿದ್ದಾರೆ -ರಾಹುಲ್ ಗಾಂಧಿ
04:53 PM: ನಮ್ಮ ಪಕ್ಷ ಮತ್ತು ಜೆಡಿಎಸ್ನ ಎಲ್ಲ ನಾಯಕರು, ಕಾರ್ಯಕರ್ತರಿಗೆ ಅಭಿನಂದನೆ. ನಾವು ಆರ್ಎಸ್ಎಸ್ ಮತ್ತು ಬಿಜೆಪಿಗೆ ನಿಮ್ಮ ಅಹಂಕಾರಕ್ಕೆ ಮಿತಿ ಇದೆ ಎಂಬುದನ್ನು ಹೇಳಿಕೊಟ್ಟಿದ್ದೇವೆ -ರಾಹುಲ್ ಗಾಂಧಿ
04:52 PM: ನಾವು ಇಂಥ ಧೋರಣೆಯ ವಿರುದ್ಧ ಹೋರಾಡ್ತಾ ಇದ್ದೇವೆ. ಅಧಿಕಾರದಲ್ಲಿದ್ದಾರೆ ಅನ್ನುವ ಏಕೈಕ ಕಾರಣಕ್ಕೆ ಬಿಜೆಪಿ, ಆರ್ಎಸ್ಎಸ್ ಯಾವುದೇ ಸಂಪ್ರದಾಯ, ಸಂಸ್ಥೆಯನ್ನು ಉಲ್ಲಂಘಿಸಬಹುದು ಎಂದುಕೊಂಡಿದೆ -ರಾಹುಲ್ ಗಾಂಧಿ
04:51 PM: ಕರ್ನಾಟಕದಲ್ಲಿ ಬಿಜೆಪಿ ಶಾಸಕರು ಮತ್ತು ಸಭಾಧ್ಯಕ್ಷರು ರಾಷ್ಟ್ರಗೀತೆಗೆ ಮೊದಲೇ ವಿಧಾನಸಭೆಯಿಂದ ಹೊರ ನಡೆದರು -ರಾಹುಲ್ಗಾಂಧಿ
04:51 PM: ಮುಗುಳ್ನಗೆಯೊಂದಿಗೆ ಗೆಲುವಿನ ಮುಖದೊಂದಿಗೆ ಮಾತು ಆರಂಭಿಸಿದ ರಾಹುಲ್
04:49 PM: ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಆರಂಭ
04:44 PM: ಸೋಮವಾರ ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ
04:43 PM: ವಿಶ್ವಾಸಮತ ಪ್ರಸ್ತಾವ ಮಂಡಿಸಿ, ಸದನದ ಪರೀಕ್ಷೆ ಎದುರಿಸ ಯಡಿಯೂರಪ್ಪ ಒಬ್ಬ ಪಲಾಯನವಾದಿ –ಸಿದ್ದರಾಮಯ್ಯ
04:39 PM: ಈಗ ನಾವು–ಜೆಡಿಎಸ್ ನಾಯಕರು ಚರ್ಚಿಸಿ, ಇವತ್ತೇ ಮುಂದಿನ ತೀರ್ಮಾನ ಪ್ರಕಟಿಸ್ತೀವಿ –ಸಿದ್ದರಾಮಯ್ಯ
04:39 PM: ಕಾಂಗ್ರೆಸ್ ನಾಯಕರಲ್ಲಿ ಭಯ ಹುಟ್ಟಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿತು. ಸ್ವಾತಂತ್ರ್ಯ ಬಂದ ನಂತರ ಹೀಗೆ ಎಂದೂ ಆಗಿರಲಿಲ್ಲ. ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಯತ್ನಿಸಿದ್ದರು. ಅದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ –ಸಿದ್ದರಾಮಯ್ಯ
04:38 PM: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಐಟಿ, ಸಿಬಿಐ, ಇಡಿ ಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಾನು ಇಂಥ ಪರಿಸ್ಥಿತಿಯನ್ನು ಎಂದೂ ನೋಡಿರಲಿಲ್ಲ –ಸಿದ್ದರಾಮಯ್ಯ
04:37 PM: ಜನರಿಗೂ ಕೋಮುವಾದಿ ಸರ್ಕಾರ ಬೇಡವಾಗಿತ್ತು. ಬಿಜೆಪಿಗೆ ಅಧಿಕಾರ ಮಾಡಲು ಜನರು ಅವಕಾಶ ಕೊಟ್ಟಿರಲಿಲ್ಲ. ಚುನಾವಣೆಯಲ್ಲಿ ಅಪಪ್ರಚಾರವೇ ಅವರ ಅಸ್ತ್ರವಾಗಿತ್ತು –ಸಿದ್ದರಾಮಯ್ಯ
04:37 PM: ನಮ್ಮ ಎಲ್ಲ ಶಾಸಕರಿಗೂ ಧನ್ಯವಾದಗಳು. ಬಿಜೆಪಿ ಒಡ್ಡಿದ ಆಮಿಷಗಳನ್ನು ಮೆಟ್ಟಿನಿಂತು ಪಕ್ಷದ ಗೌರವ ಕಾಪಾಡಿದ್ದಾರೆ. ರಾಜ್ಯಕ್ಕೆ ಒದಗಿದ್ದ ಆತಂಕ ದೂರವಾಗಿದೆ –ಸಿದ್ದರಾಮಯ್ಯ
04:36 PM: ಯಡಿಯೂರಪ್ಪ ಸಹ ಗೂಬೆಲ್ಸ್ ಥರ ವರ್ತಿಸ್ತಿದ್ದಾರೆ. ಅವರು ಈವರೆಗೆ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿಲ್ಲ. ಕೇಂದ್ರದ ಅಧಿಕಾರ, ರಾಜ್ಯಪಾಲರು ಆರ್ಎಸ್ಎಸ್ ಮೂಲದವರು ಎಂದುಕೊಂಡಿದ್ದರು. ಅದಕ್ಕೆ ನ್ಯಾಯಾಲಯ ಬಿಡಲಿಲ್ಲ –ಸಿದ್ದರಾಮಯ್ಯ
04:35 PM: ನಮ್ಮ ಶಾಸಕರ ಬಗ್ಗೆ ಅವರಿಗೆ ಈಗ ಪ್ರೀತಿ ಬಂದಿದೆ. ಇಂಥ ಪರಿಸ್ಥಿತಿ ನಿರ್ಮಾಣವಾಗಲು ಅವರೇ ಕಾರಣ 2008ರಂತೆ ಈಗ ಅವರಿಗೆ ಅನುಕಂಪ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ. –ಎಚ್.ಡಿ. ಕುಮಾರಸ್ವಾಮಿ
04:34 PM: ಸುಪ್ರೀಂಕೋರ್ಟ್ 24 ಗಂಟೆಯಲ್ಲಿ ವಿಶ್ವಾಸಮತ ಪಡೆಯಬೇಕು ಅಂತ ತೀರ್ಪು ಕೊಡದಿದ್ದರೆ 15 ದಿನಗಳಲ್ಲಿ ರಾಜ್ಯದ ಜನರ ಪರಿಸ್ಥಿತಿ ಏನಾಗ್ತಿತ್ತು –ಎಚ್.ಡಿ.ಕುಮಾರಸ್ವಾಮಿ
04:33 PM: ವಿಫಲ ಪ್ರಯತ್ನಗಳ ನಂತರ ಭಾವನಾತ್ಮಕ ಮಾತುಗಳ ಮೂಲಕ ಯಡಿಯೂರಪ್ಪ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ನಾಟಕೀಯ ಪ್ರಯತ್ನ ಮಾಡಿದರು –ಎಚ್.ಡಿ.ಕುಮಾರಸ್ವಾಮಿ
04:32 PM: ‘ಬಿಜೆಪಿ ಅವರು ವ್ಯರ್ಥ ಕಸರತ್ತು ಮಾಡಿದರು’ –ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ
04:32 PM: ಜನರು ಕೊಟ್ಟ ತೀರ್ಪನ್ನು ಬಿಜೆಪಿ ಒಪ್ಪಿಕೊಳ್ಳಲಿಲ್ಲ. ಮೋದಿ– ಶಾ ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕುದಾಗಿ ನಡೆದುಕೊಳ್ಳಲಿಲ್ಲ. ಇದು ಖಂಡನೀಯ –ಸಿದ್ದರಾಮಯ್ಯ
04:31 PM: ಸಂವಿಧಾನದ ಆಶಯಗಳು ಮತ್ತು ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳಿಗೆ ವಿರುದ್ಧವಾಗಿ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ– ಸಿದ್ದರಾಮಯ್ಯ
04:30 PM: ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ. ‘ವಿಶ್ವಾಸಮತ ಯಾಚಿಸದೆ ಪಲಾಯನ ಮಾಡಿದ ಯಡಿಯೂರಪ್ಪ’ ಸಿದ್ದರಾಮಯ್ಯ ಲೇವಡಿ
04:24 PM: ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಪ್ರಮಾಣವಚನ ಸಾಧ್ಯತೆ
04:19 PM: ರಾಜ್ಯಪಾಲ ವಜುಭಾಯಿ ವಾಲಾಗೆ ರಾಜೀನಾಮೆ ಪತ್ರ ಸಲ್ಲಿಸಿದ ಯಡಿಯೂರಪ್ಪ
04:18 PM: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಿ.ಎಸ್.ಯಡಿಯೂರಪ್ಪ
04:16 PM: ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಲಿರುವ ಯಡಿಯೂರಪ್ಪ
04:13 PM: ರಾಜೀನಾಮೆ ನೀಡಲು ರಾಜಭವನಕ್ಕೆ ತೆರಳಿದ ಬಿಎಸ್ವೈ
04:13 PM: ರಾಜಭವನಕ್ಕೆ ತೆರಳಿದ ಬಿ.ಎಸ್.ಯಡಿಯೂರಪ್ಪ
04:12 PM: ಜನತಾ ಜನಾರ್ದನನ ಮುಂದೆ ಹೋಗಿ ನ್ಯಾಯ ಕೇಳಲಿದ್ದೇನೆ ಎಂದ ಯಡಿಯೂರಪ್ಪ
04:09 PM: ಸಂಭ್ರಮ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ
04:07 PM: ಮೂರೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡ ಯಡಿಯೂರಪ್ಪ
04:06 PM: ಸದನವನ್ನು ಅನಿರ್ದಿಷ್ಟ ಕಾಲ ಮುಂದೂಡಿದ ಸ್ಪೀಕರ್ ಬೋಪಯ್ಯ
04:05 PM: ವಿಶ್ವಾಸಮತ ಯಾಚಿಸದೆ ರಾಜೀನಾಮೆ ಘೋಷಿಸಿದ ಯಡಿಯೂರಪ್ಪ
04:05 PM: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ
04:05 PM: ಕಾಂಗ್ರೆಸ್ ನಾಯಕರ ಕುತಂತ್ರದಿಂದ ಜನಾದೇಶಕ್ಕೆ ಹಿನ್ನಡೆ
04:04 PM: ಅಧಿಕಾರ ಸಿಗಲಿ ಬಿಡಲಿ, ಜನರಿಗಾಗಿ ಜೀವ ಸವೆಸಲಿದ್ದೇನೆ
04:03 PM: ಶಾಸಕರನ್ನು ಕೂಡಿಹಾಕಿದ ವಿಷಯ ಪ್ರಸ್ತಾಪಿಸಿದಾಗ ಡಿ.ಕೆ. ಶಿವಕುಮಾರ್ ಮಂದಹಾಸ
04:03 PM: ಆಶೀರ್ವಾದ ಮಾಡಿದ ರಾಜ್ಯದ ಜನತೆಗೆ ಕೃತಜ್ಞೆ ಸಲ್ಲಿಸುತ್ತೇನೆ
04:02 PM: ಜೀವನದ ಕೊನೆಯ ಉಸಿರಿನವರೆಗೂ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಲಿದ್ದೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನೂ ಗೆಲ್ಲಿಸಕೊಡಲಿದ್ದೇನೆ
04:01 PM: ಇದು ಮೊದಲಲ್ಲ. ನನ್ನ ಜೀವನದ ಉದ್ದಗಲಕ್ಕೂ ಅಗ್ನಿಪರೀಕ್ಷೆ ಎದುರಿಸಿದ್ದೇನೆ.
04:00 PM: ರಾಜ್ಯದ ಜನ 113 ಸ್ಥಾನ ನೀಡಿದ್ದರೆ ರಾಜ್ಯದ ಚಿತ್ರಣವೇ ಬೇರೆ ಇರುತ್ತಿತ್ತು
04:00 PM: ಕೇಂದ್ರದಿಂದ ಹೆಚ್ಚುವರಿ ಹಣ ತಂದು ಕರ್ನಾಟಕವನ್ನು ಮಾದರಿ ರಾಜ್ಯ ಮಾಡಬೇಕು ಅಂದುಕೊಂಡಿದ್ದೆ
04:00 PM: ಮೋದಿ ಅವರು ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಲಿಲ್ಲ. ಅಲ್ಲಿ ಪ್ರಧಾನಿ ಸರ್ಕಾರ, ಇಲ್ಲಿ ನನ್ನ ಸರ್ಕಾರ
03:59 PM: ಇಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಕೇಂದ್ರ ಅಗತ್ಯ ಹಣಕಾಸು ನೆರವು ಕೊಟ್ಟಿದೆ. ರೈಲು, ಮೆಟ್ರೊ ಯೋಜನೆಗಳಿಗೆ ಹಣ ಕೊಟ್ಟಿದೆ.
03:58 PM: ಐದು ವರ್ಷದ ಹಿಂದೆ ಆಲಮಟ್ಟಿ ಅಣೆಕಟ್ಟು 524 ಮೀಟರ್ ಏರಿಸಲು ನಿಮ್ಮ ಸರ್ಕಾರ ಏನು ಮಾಡಲಿಲ್ಲ. ನಾನು ತಕ್ಷಣ ಈ ಕೆಲಸ ಮಾಡಲು ನಿರ್ಧರಿಸಿದ್ದೆ.
03:57 PM: ಸ್ಲಂಗಳ ಸ್ಥಿತಿ ನನಗೆ ಗೊತ್ತಿದೆ. ಅಷ್ಟು ಸಣ್ಣ ಮನೆಗಳಲ್ಲಿ ಹೇಗೆ ಬದುಕಿರಬೇಕು?
03:57 PM: ಈ ನಾಡಿನ ಪರಿಶಿಷ್ಟ ಜಾತಿ/ಪಂಗಡದವರ ಸಂಕಷ್ಟ ತಿಳಿದುಕೊಳ್ಳಲು ಅವರ ಮನೆಗಳಿಗೆ ಹೋಗಿ ತಿಂಡಿ ತಿಂದೆ. ಅವರ ಕಷ್ಟ ಅರಿತೆ.
03:57 PM: ನೀರಾವರಿಗೆ ಆದ್ಯತೆ ನೀಡಬೇಕು. ಆವರ್ತ ನಿಧಿಯ ಮೂಲಕ ಬೆಳೆಗಳಿಗೆ ಬೆಂಬಲ ಬೆಲೆ ಕೊಡಬೇಕು ಅಂತ ಆಲೋಚಿಸಿದ್ದೆ
03:56 PM: ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ₹1ಲಕ್ಷದವರೆಗಿನ ರೈತರ ಸಾಲ, ನೇಕಾರರ ಸಮುದಾಯದ ಸಾಲ ಮನ್ನಾ ಮಾಡಬೇಕು ಅಂತ ಅಂದುಕೊಂಡಿದ್ದೆ
03:55 PM: ನನ್ನ ಬದುಕಿನ ಕೊನೆಯ ಉಸಿರು ಇರುವವರೆಗೆ ನಾಡಿನ ರೈತರ ಸೇವೆಗೆ ಮುಡಿಪಾಗಿಡ್ತೀನಿ
03:55 PM: ನಿರಂತರ ಹೋರಾಟ, ಚಳವಳಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಜನರ ಸೇವೆ ಮಾಡಬೇಕು ಎನ್ನುವ ಹಂಬಲ ನನ್ನಲ್ಲಿದೆ.
03:54 PM: ಆಡಳಿತದ ಬಗ್ಗೆ ಬೇಸತ್ತಿರುವ ಸಂದರ್ಭದಲ್ಲಿ ಚುನಾವಣೆ ನಡೆಯಿತು
03:53 PM: ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಮಗೆ ನೀರಾವರಿ ಯೋಜನೆ ಪೂರ್ಣ ಮಾಡಲು ಆಗಲಿಲ್ಲ. ಕುಡಿಯುವ ನೀರು ಕೊಡಲು ಆಗಲಿಲ್ಲ. ಸಂಕಷ್ಟ ಪರಿಸ್ಥಿತಿ ನಾಡಿನ ಉದ್ದಗಲಕ್ಕೆ ಇದೆ.
03:52 PM: ವ್ಯವಸ್ಥೆ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದನ್ನು ನಾವೆಲ್ಲ ನೋಡಿದ್ದೇವೆ
03:52 PM: ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ
03:52 PM: ಬದುಕಿನ ಕೊನೆಯ ಉಸಿರು ಇರುವವರೆಗೂ ರೈತರು ನೆಮ್ಮದಿಯಿಂದ ಗೌರವದಿಂದ ಸ್ವಾಭಿಮಾನದಿಂದ
ಬಾಳಬೇಕು. ಅದಕ್ಕೆ ಎಲ್ಲರೂ ಒಗ್ಗೂಡಿ ಶ್ರಮ ಹಾಕಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯ
03:49 PM: ಜೆಡಿಎಸ್ ವಿರುದ್ಧ ಅವಕಾಶವಾದಿ ರಾಜಕಾರಣದ ಆರೋಪ
03:49 PM: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಸ್ವೈ ಟಾಂಗ್
03:47 PM: ಈ ಸದನ ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ. ಅಧ್ಯಕ್ಷರು ಅಗತ್ಯಕ್ರಮ
ಕೈಗೊಳ್ಳಬೇಕು ಅಂತ ಕೋರುತ್ತೇನೆ ಎಂದು ಯಡಿಯೂರಪ್ಪ ಪ್ರಸ್ತಾಪ ಮಂಡನೆ
03:46 PM: ಮೋದಿ- ಶಾ ನೆನೆದು ಮಾತು ಆರಂಭಿಸಿದ ಯಡಿಯೂರಪ್ಪ
03:43 PM: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಪ್ರಸ್ತಾಪ ಮಂಡನೆ ಆರಂಭ