129337a9d131e34228794a4d9a8dcf57

ಬೆಂಗಳೂರು : ಸುಪ್ರೀಂಕೋರ್ಟ್ ಆದೇಶದಂತೆ ಬಹುಮತ ಸಾಬೀತು ಪಡಿಸಲು ಕರೆಯಲಾಗಿರುವ ತುರ್ತು ವಿಧಾನಸಭೆ ಕಲಾಪ ಆರಂಭಗೊಂಡಿದ್ದು, ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಾಯ್ಯ ಅವರು ನೂತನ ಶಾಸಕರಿಗೆ ಪ್ರಮಾಣ ಬೋಧಿಸುತ್ತಿದ್ದಾರೆ. ಕಲಾಪ ಆರಂಭಕ್ಕೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪೀಕರ್ ಗೆ ಕಾಂಗ್ರೆಸ್ ಶಾಸಕರ ಸಹಿಯುಳ್ಳ ಪ್ರಮಾಣ ಪತ್ರ, ಶಾಸಕಾಂಗದ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿರುವ ಪತ್ರ ಮತ್ತು ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ ಮಾಡಿರುವ ಕುರಿತು ಮೂರು ಪತ್ರಗಳನ್ನು ಸಲ್ಲಿಸಿದ್ದರು.

ಕಲಾಪಕ್ಕೆ ಬಿಜೆಪಿಯ ಎಲ್ಲಾ 104 ಶಾಸಕರು, ಜೆಡಿಎಸ್ ನ 37 ಶಾಸಕರು, ಹಾಗೂ ಇಬ್ಬರು ಪಕ್ಷೇತರ ಶಾಸಕರು ಮತ್ತು ಕಾಂಗ್ರೆಸ್ ನ 76 ಶಾಸಕರು ಮಾತ್ರ ಹಾಜರಾಗಿದ್ದಾರೆ.

 

By suddi9

Leave a Reply

Your email address will not be published. Required fields are marked *