ಬೆಂಗಳೂರು: ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಅವರಿಗೆ ಶ್ರೀರಾಮುಲು ವಿಂದ ’25’ ಆಫರ್. ಅವರೊಡನೆ ಬರುವ ಶಾಸಕರಿಗೆ 15 ಆಫರ್. ವಿವರ ಆಡಿಯೋ ಸುರಳಿ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದೆ.
ಶ್ರೀರಾಮುಲು: ನಾನು ರಾಮುಲು ಮಾತಡ್ತಾ ಇದ್ದೇನೆ..
ಬಿ.ಸಿ. ಪಾಟೀಲ್: ಹಾ. ನಮಸ್ಕಾರ ಹೇಳಿ ಅಣ್ಣಾ. ಬ್ರದರ್.
ಶ್ರೀರಾಮುಲು: ಏನು ಎಕ್ಸ್ ಪೆಕ್ಟ್ ಮಾಡ್ತೀರಾ?
ಬಿ.ಸಿ.ಪಾಟೀಲ್: ‘ಸಾಹೇಬ್ರು’ ಹಂಗೆ ಹೇಳಿದ್ರು. ಆದರೆ ಅಮೌಂಟ್ ಬಗ್ಗೆ ಏನೂ ಹೇಳಲಿಲ್ಲ.
ಶ್ರೀರಾಮುಲು: ಹೇಳಿ ಏನು ಅಮೌಂಟ್ ಎಕ್ಸ್ ಪೆಕ್ಟ್ ಮಾಡ್ತೀರಾ?
ಬಿಸಿಪಾ: ನೀವೇ ಹೇಳಬೇಕು.
ಶ್ರೀರಾ: 25 ಅಂತ ಹೇಳಿದ್ದೆ.
ಬಿಸಿಪಾ: ನನ್ನ ಜತೆಯಲ್ಲಿ 3-4 ಜನರಿದ್ದಾರೆ. ಅವರಿಗೆ ಕ್ಲಾರಿಫೈ ಮಾಡಬೇಕು
ಶ್ರೀರಾ: ಅವರಿಗೆ 10ರಿಂದ 15 ಕೊಡ್ತೀವಿ
ಬಿಸಿಪಾ: ಅಣ್ಣಾ. ಅಣ್ಣಾ.ಅವರ ಪೊಸಿಷನ್ ಏನು?
ಶ್ರೀರಾ: ಅವರನ್ನೂ ಮಂತ್ರಿ ಮಾಡ್ತೀವಿ.
ಬಿಸಿಪಾ: ನನ್ನ ಕ್ಷೇತ್ರದಲ್ಲಿ ಯು.ಬಿ. ಬಣಕಾರ್ ಇದ್ದು, ಅವರು ತುಂಬಾ ಸ್ಟ್ರಾಂಗ್ ಇದ್ದಾರೆ. ಅವರು ಮತ್ತೊಂದು ಪಕ್ಷಕ್ಕೆ ಹೋಗಿ ನನ್ನ ವಿರುದ್ಧ ಚುನಾವಣೆಗೆ ನಿಂತರೆ.?
ಶ್ರೀರಾ: ಡೋಂಟ್ ವರಿ. ಎಲೆಕ್ಶನ್ ಇರುವುದಿಲ್ಲ.ನಾವು ನಮ್ಮದೇ ಸ್ಪೀಕರ್ ಎಲೆಕ್ಟ್ ಮಾಡ್ತೀವಿ. ಮೆಜಾರಿಟಿ ಪ್ರೂವ್ ಮಾಡ್ತೀವಿ. ಆಂಧ್ರ ಪ್ರದೇಶ್ ದಲ್ಲಿ ಏನಾಯ್ತು ಗೊತ್ತಲ್ಲಾ ಅಣ್ಣಾ. ಎಂಎಲ್ ಎ ಗಳನ್ನು ಅಮಾನತ್ತು ಮಾಡೋದಿಲ್ಲ. ನಮ್ಮದೇ.. ಸೆಂಟ್ರಲ್ ಗೌರ್ನಮೆಂಟ್ ಕೂಡ ಇದೆ. ನಮ್ಮದೇ ಎಲೆಕ್ಶನ್ – ಗಿಲೆಕ್ಶನ್ ಏನೂ ಇರಲ್ಲ. ನಾನು ಫೋನ್ ಈಗ ಮುರಳೀಧರ್ ರಾವ್ ಗೆ ಕೊಡ್ತೀನೀ. ಅವರಹತ್ತಿರ ಮಾತಾಡಿ.
ಬಿ.ಸಿ.ಪಾಟೀಲ್: ಅವೆಲ್ಲಾ ಏನೂ ಬೇಡಾ ಬ್ರದರ್.
ಶ್ರೀರಾ: ಇಲ್ಲಾ ಮಾತನಾಡಿ.
ಬಿ.ಸಿ.ಪಾಟೀಲ್: ಓ.ಕೆ. ಓ.ಕೆ. ಓ.ಕೆ. ಬ್ರದರ್
ಮುರಳಿಧರ ರಾವ್: ನೀವು ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ.ನೀವು ಎಲೆಕ್ಶನ್ ಗೆ ಹೋಗುವ ಅಗತ್ಯವೇ ಬಾರದು
ಬಿಸಿಪಾ: ನನ್ನ ಜತೆ 3ರಿಂದ ನಾಲ್ಕು ಶಾಸಕರಿದ್ದು, ಅವರ ಪರವಾಗಿ ನಾನೇ ಕೇಳಬೇಕು. ನೀವು ಒಂದು ಫಿಗರ್ ಹೇಳಿ.
(ರಾಮುಲು ಮಧ್ಯಪ್ರವೇಶ)
ಶ್ರೀರಾ: ಪಾಟೀಲ್ ಸಾಹೇಬರೆ ನಾನು ಈಗಾಗಲೇ 15 ಹೇಳಿದ್ದೇನೆ. ಇವರ ಬಳಿ ನೀವು ಫಿಗರ್ ಕೇಳಬೇಡಿ
ಮುರಳಿಧರರಾವ್: ನಾವು ರೆಡಿ ಇದ್ದೇವೆ. ಯಾರಿಗೂ ಎಲೆಕ್ಶನ್ ಇಲ್ಲ.ಎಲ್ಲಾ ಸ್ಪೀಕರ್ ಗೆ ಬಿಟ್ಟಿದ್ದು. ಎಲ್ಲ ರಾಜ್ಯಗಳಲ್ಲೂ ಇದೇ same. ನಾವು ನಿಮ್ಮೊಂದಿಗೆ ಎಂದಿಗೂ ಇದ್ದೇವೆ. ಇದು ನನ್ನ ಮಾತು. ಆಂಧ್ರ ತೆಲಂಗಾಣದಲ್ಲೂ ಹೀಗೆ ಆಗಿತ್ತು.
ಬಿಸಿಪಾ: ಸಾರ್ ನಾನು ಇಲ್ಲೂ ಮಿನಿಸ್ಟರ್ ಆಗ್ತೀನೀ ಸಾರ್.
ಮುರಳೀಧರ್ ರಾವ್: ಸಾರ್. ನೂರಾ ನಾಲ್ಕೇ ಸ್ಟೇಬಲ್ ಆಗಿಲ್ಲ ಅಂದರೆ. 38 ಹೇಗೆ ಸ್ಟೇಬಲ್ ಆಗುತ್ತದೆ.
ಬಿಸಿಪಾ: ಯೆಸ್ ಸಾರ್. ಯೆಸ್ ಸಾರ್.!!
