ಕೈಕಂಬ : ಅಂತಾರಾಷ್ಟ್ರೀಯ ಗುಣಮಟ್ಟದ ಕೇಕ್ ಹಾಗೂ ಇತರ ಐಟಂಗಳಿಗೆ ಹೆಸರುವಾಸಿಯಾದ `ರಿಬ್ಬನ್ಸ್ & ಬಲೂನ್ಸ್’ ಸಂಸ್ಥೆಯ ನೂತನ ಮಳಿಗೆ ಅ. 19ರಂದು ವಾಮಂಜೂರು ಜಂಕ್ಷನ್ನಲ್ಲಿರುವ `ಸಾಧನಾ ಸಹಕಾರಿ ಸೌಧ’ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.
ಬಂಟರ ಯಾನೆ ನಾಡವರ ಮಾತೃ ಸಂಘದ(ಮಂಗಳೂರು) ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನೂತನ ಮಳಿಗೆ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ರೆ. ಫಾ. ಜೇಮ್ಸ್ ಡಿ’ಸೋಜ(ಧರ್ಮಗುರು, ಸೈಂಟ್ ಜೋಸೆಫ್ ವರ್ಕರ್ಸ್ ಚರ್ಚ್, ವಾಮಂಜೂರು), ಶಿವಕುಮಾರ್ ಶರ್ಮ(ಉದ್ಯಮಿ), ಬಿ ಎ ಮೊೈದಿನ್ ಬಾವ(ಮಾಜಿ ಶಾಸಕ), ಓಂಪ್ರಕಾಶ್ ಶೆಟ್ಟಿ(ಅಧ್ಯಕ್ಷ, ವಿಎಸ್ಎಸ್-ಗುರುಪುರ), ಶಶಿಧರ ಹೆಗ್ಡೆ(ಮಾಜಿ ಮೇಯರ್, ಕಾರ್ಪೊರೇಟರ್, ಮಂಗಳೂರು), ಶಶಿರಾಜ್ ಶೆಟ್ಟಿ ಕೊಳಂಬೆ(ದಾಮಿನಿ ರಿಯಲ್ ಎಸ್ಟೇಟ್&ಪ್ರೊಮೋಟರ್ಸ್) ಪಾಲ್ಗೊಳ್ಳಲಿದ್ದಾರೆ.
ಪುಣೆ ಮತ್ತು ಮುಂಬೈ ಮೂಲಕ ದೇಶಾದ್ಯಂತ ಕಾರ್ಯಾಚರಿಸುತ್ತಿರುವ `ರಿಬ್ಬನ್ಸ್ & ಬಲೂನ್ಸ್’ ಸಂಸ್ಥೆಯು ದಕ ಮತ್ತು ಉಡುಪಿಯಲ್ಲಿ ಈಗಾಗಲೇ 13 ಮಳಿಗೆ ಹೊಂದಿದ್ದು, ವಾಮಂಜೂರಿನಲ್ಲಿ 14ನೇ ಮಳಿಗೆ ಆರಂಭಗೊಳ್ಳಲಿದೆ. ನಿಧಿ ಎಂಟರ್ಪ್ರೈಸೆಸ್ನಡಿ ನೋಂದಾಯಿತ ಈ ಮಳಿಗೆಯಲ್ಲಿ ಗುರುಪುರ, ಕೈಕಂಬ, ಗಂಜಿಮಠ, ಎಡಪದವು, ಕಂದಾವರ, ಅಡ್ಡೂರು, ಪೊಳಲಿ, ಪಚ್ಚನಾಡಿ, ಮಲ್ಲೂರು, ಉಳಾಯಿಬೆಟ್ಟು, ಪೆರ್ಮಂಕಿ, ನೀರುಮಾರ್ಗ ಸುತ್ತಮುತ್ತ ಪ್ರದೇಶದ ಮಂದಿಗೆ ತರಹತರಹದ ತಾಜಾ ಕೇಕ್ಗಳು ಕೈಗೆಟಕುವ ಬೆಲೆಗೆ ಲಭಿಸಲಿದೆ ಎಂದು ಜಂಟಿ ಪಾಲುಗಾರಿಕೆ ಹೊಂದಿರುವ ಕೆ ಜಗದೀಶ ಶೆಟ್ಟಿ ಮತ್ತು ಕುಶಲತಾ ವಿ ಶೆಟ್ಟಿ ಪ್ರಕಟಣೆ ತಿಳಿಸಿದೆ.