ಪೊಳಲಿ: ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ಪೊಳಲಿ, ಕರಿಯಂಗಳ, ಅಮ್ಮುಂಜೆ, ಬಡಕಬೈಲು ಗ್ರಾಮಗಳ ಸಹಿತ ಒಂಬತ್ತು ಗ್ರಾಮಗಳ ೩೧೫ ಬಡ ಕುಟುಂಬಗಳಿಗೆ ಅಕ್ಕಿ ಒಳಗೊಂಡ ದಿನಸಿ ಸೊತ್ತಿನ ಕಿಟ್ ವಿತರಿಸಲಾಯಿತು.

gur-june-14-thapovana-1

 

ತಪೋವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಹಾಗೂ ಠಾಕೂರ್ ಪ್ರಸಾದ್ ಅವರು ಬಡ ಕುಟುಂಬಗಳಿಗೆ ಒಂದು ವಾರಕ್ಕೆ ಸಾಕಾಗುವಷ್ಟು ದಿನಸಿ ಸೊತ್ತು ಒಳಗೊಂಡ ಕಿಟ್ ವಿತರಿಸಿದರು.gur-june-14-thapovana-2

“ಕೋವಿಡ್ ಸಂಕಷ್ಟದ ಈ ಕಾಲದಲ್ಲಿ ಯಾರೊಬ್ಬರೂ ಹಸಿದ ಹೊಟ್ಟೆಯಲ್ಲಿರಬಾರದು. ಹಸಿದವರಿಗೆ ನೆರವಾಗುವ ನಿಟ್ಟಿನಲ್ಲಿ ತಪೋವನದಿಂದ ಇದೊಂದು ಸಣ್ಣ ನೆರವು” ಎಂದು ಸ್ವಾಮಿ ವಿವೇಕ ಚೈತನ್ಯಾನಂದರು ಹೇಳಿದರು.

By suddi9

Leave a Reply

Your email address will not be published. Required fields are marked *