ಪೊಳಲಿ: ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ಪೊಳಲಿ, ಕರಿಯಂಗಳ, ಅಮ್ಮುಂಜೆ, ಬಡಕಬೈಲು ಗ್ರಾಮಗಳ ಸಹಿತ ಒಂಬತ್ತು ಗ್ರಾಮಗಳ ೩೧೫ ಬಡ ಕುಟುಂಬಗಳಿಗೆ ಅಕ್ಕಿ ಒಳಗೊಂಡ ದಿನಸಿ ಸೊತ್ತಿನ ಕಿಟ್ ವಿತರಿಸಲಾಯಿತು.
ತಪೋವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಹಾಗೂ ಠಾಕೂರ್ ಪ್ರಸಾದ್ ಅವರು ಬಡ ಕುಟುಂಬಗಳಿಗೆ ಒಂದು ವಾರಕ್ಕೆ ಸಾಕಾಗುವಷ್ಟು ದಿನಸಿ ಸೊತ್ತು ಒಳಗೊಂಡ ಕಿಟ್ ವಿತರಿಸಿದರು.
“ಕೋವಿಡ್ ಸಂಕಷ್ಟದ ಈ ಕಾಲದಲ್ಲಿ ಯಾರೊಬ್ಬರೂ ಹಸಿದ ಹೊಟ್ಟೆಯಲ್ಲಿರಬಾರದು. ಹಸಿದವರಿಗೆ ನೆರವಾಗುವ ನಿಟ್ಟಿನಲ್ಲಿ ತಪೋವನದಿಂದ ಇದೊಂದು ಸಣ್ಣ ನೆರವು” ಎಂದು ಸ್ವಾಮಿ ವಿವೇಕ ಚೈತನ್ಯಾನಂದರು ಹೇಳಿದರು.
