ಕೈಕಂಬ: ಗುರುಪುರ ಮಾಣಿಬೆಟ್ಟು ಶ್ರೀ ಕರ‍್ದಬ್ಬು ಪರಿವಾರ ದೈವಸ್ಥಾನಕ್ಕೆ ಹತ್ತಿರದಲ್ಲಿದ್ದ ಮೂಲ ಸಾನಿಧ್ಯವಿದ್ದ ಜಾಗದಲ್ಲಿ ಉತ್ಖನನ ಮಾಡಿದಾಗ ಸುಮಾರು ೩೦೦ ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಪರಿಕರಗಳು ಪತ್ತೆಯಾಗಿವೆ.gur-june-16-parikara-1

ಈ ಜಾಗದಲ್ಲಿ ದೋಷವಿದೆ ಮತ್ತು ಹಳೆಯ ದೈವಸ್ಥಾನವಿದ್ದ ಜಾಗದಲ್ಲಿರಬಹುದಾದ ದೈವದ ಸೊತ್ತುಗಳ ಪತ್ತೆ ಹಚ್ಚಿ, ವಿಸರ್ಜಿಸಿದಾಗ ದೋಷ ನಿವಾರಣೆಯಾಗುತ್ತದೆ ಎಂದು ಇತ್ತೀಚೆಗೆ ದೈವಸ್ಥಾನದಲ್ಲಿ ಇಡಲಾಗಿದ್ದ ತಾಂಬೂಲ ಪ್ರಶ್ನೆಯ ವೇಳೆ ಶಶಿಕುಮಾರ್ ಪಂಡಿತ್ ತಿಳಿಸಿರುತ್ತಾರೆ. ಅಂತೆಯೇ ಬುಧವಾರ ಸ್ಥಳದಲ್ಲಿ ಉತ್ಖನನ ಮಾಡಲಾಯಿತು.15vp manibetu2

ಉತ್ಖನನದ ವೇಳೆ ಸುಮಾರು ೩೦೦ ವರ್ಷಗಳಷ್ಟು ಹಳೆಯದಾದ ಕರ‍್ದಬ್ಬು ಅಥವಾ ಪಂಜುರ್ಲಿ ದೈವದ ಮೂರ್ತಿ, ಕಂಚಿನ ಮೊಲ, ಖಡ್ಸಲೆ, ಗೋಣ(ಕೋಣ), ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ತಂದೇಲ್, ದೀಪ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ. ಇವುಗಳಲ್ಲಿ ದೀಪ ಮಣ್ಣಿದ್ದಾಗಿದ್ದರೆ, ಉಳಿದ ಸೊತ್ತುಗಳು ಪಂಚಲೋಹ, ಕಂಚು, ಹಿತ್ತಾಳೆ ಮತ್ತು ಕಬ್ಬಿಣದ್ದಾಗಿವೆ.15vp manibettu

ಉತ್ಖನನಕ್ಕೆ ಮುಂಚೆ ಕಾವೂರಿನ ವಿನಾಯಕ ಕಾರಂತರು ಸಂಕೋಚ ಮಾಡಿದರು. ವಾಸುದೇವ ಭಟ್, ಗಂಗಾಧರ ಸಪಲಿಗ, ಲಕ್ಷ್ಮನ  ಸಾಲ್ಯಾನ್, ಶ್ರೀನಿವಾಸ ಆಳ್ವ ಕಾರಮೊಗರುಗುತ್ತು, ದೀಪಕ್ ಬಂಗೇರ, ಸುಶೀಲ್ ಸಪಲಿಗ, ಜಗದೀಶ ಶೆಟ್ಟಿ, ಪ್ರಭಾಕರ ಶೆಟ್ಟಿ, ನಳಿನಿ ಶೆಟ್ಟಿ, ಪ್ರಜ್ವಲ್ ಬರ್ಕೆ, ಸಾಲ್ಯಾನ್ ಕುಟುಂಬಿಕರು, ಭಕ್ತರು ಹಾಗೂ ಕುತೂಹಲಿಗರು ಉಪಸ್ಥಿತರಿದ್ದರು.gur-june-16-parikara-6

“ಪತ್ತೆಯಾಗಿರುವ ಸೊತ್ತುಗಳು ಸುಮಾರು ೩೦೦ ವರ್ಷ ಪ್ರಾಚೀನದ್ದಾಗಿರಬಹುದು. ಸದ್ಯ ಇವುಗಳನ್ನು ದೈವಸ್ಥಾನದಲ್ಲಿಡಲಾಗಿದೆ. ಇಲ್ಲಿನ ಶ್ರೀ ಕರ‍್ದಬ್ಬು ಕಾರಣಿಕದ ದೈವ ಎಂಬುದಕ್ಕೆ ಈಗ ಸಿಕ್ಕಿರುವ ಪುರಾತನ ಸೊತ್ತುಗಳು ಸಾಕ್ಷವಾಗಿವೆ. ತುಳುನಾಡ ಜಾನಪದ ಅಧ್ಯಯನಕ್ಕೆ ಇದು ಪೂರಕ ಸೊತ್ತುಗಳಾಗಬಹುದು” ಎಂದು ಮಾಣಿಬೆಟ್ಟುಗುತ್ತು ವಿನಯಕುಮಾರ್ ಶೆಟ್ಟಿ ಹೇಳಿದರು.

By suddi9

Leave a Reply

Your email address will not be published. Required fields are marked *