ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವವು ಮಾ.11ರಂದು ಬುಧವಾರದಂದು ಜರಗಲಿದೆ. ವಿಶ್ವಭಾವೈಕ್ಯ ಮಂದಿರದ ವಾರ್ಷಿಕೋತ್ಸವದ ಪ್ರಯುಕ್ತ ಬೆಳಗ್ಗೆ 8.30ರಿಂದ 12.30ರವರೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಚಂಡಿಕಾಹೋಮ ನೆರವೇರುವುದು.
ಮಧ್ಯಾಹ್ನ ರಾಮಕೃಷ್ಣ ತಪೋವನದ ಆಶ್ರಮದಲ್ಲಿ ಅನ್ನಪ್ರಸಾದ. 2 ಗಂಟೆಯಿಂದ 4.30ರವರೆಗೆ ರಾಮಕೃಷ್ಣ ತಪೋವನದ ಬಾಲಕಾಶ್ರಮದವಿದ್ಯಾರ್ಥಿ ಗಳಿಂದ “ರತಿ ಕಲ್ಯಾಣ” ಪೌರಾಣಿಕ ಯಕ್ಷಗಾನ ನಡೆಯಲಿದೆ. ಸಾಯಂಕಾಲ 4.30ರಿಂದ 5.30ರವರೆಗೆ ಜೀವಂತ “ದುರ್ಗಾಪೂಜೆ” ಬಡ ಮಾತೆಯರಿಗೆ ಸೀರೆ ಅನ್ನ ತಟ್ಟೆ ಇತ್ಯಾದಿಗಳ ವಿತರಣೆ. 6.30ಕ್ಕೆ ಸಂಧ್ಯಾರತಿ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಸುದ್ದಿ9ಗೆ ತಿಳಿಸಿದ್ದಾರೆ.
*ನಿರಂತರ ಸೇವೆಯೊಂದಿಗೆ ಪೊಳಲಿ ರಾಮಕ್ರಷ್ಣ ತಪೋವನ.
*ಬಡಗಂಡುಮಕ್ಕಳಿಗೆ ಉಚಿತ ವಿದ್ಯಾರ್ಥಿ ನಿಲಯ ಸೌಲಭ್ಯ.
*ಸ್ವಾಮಿ ವಿವೇಕಾನಂದ ಕಂಪ್ಯೂಟರ್ ತರಬೇತಿ ಸ್ವಲಭ್ಯ.
*ಪ್ರಾಥಮಿಕ ಾರೋಗ್ಯ ಕೇಂದ್ರ -ವೈದ್ಯರು ಔಷಧಾಲಯ.ಪ್ರಯೋಗಾಲಯ (ಲ್ಯಾಬ್) ಸೌಲಭ್ಯ.
*ಪುಸ್ತಕ ಮಳಿಗೆ ಮತ್ತು ವಾಚನಾಲಯ (ಲೈಬ್ರೆರಿ) ಸೌಲಭ್ಯ.
*ಪ್ರತಿ ಬಾನುವಾ ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳ ತರಗತಿಗಳು ಉಚಿತವಾಗಿ ನಡೆಯುತ್ತಿವೆ.
*ಪ್ರಕ್ರತಿ ಮತ್ತು ಯೋಗ ಚಿಕತ್ಸಾಲಯ.
*ಭರತನಾಟ್ಯ ತರಗತಿಗಳು ನಡೆಯುತ್ತಿವೆ.
*ಹಾರ್ಮೋನಿಯಂ ,ತಬಲ,ಕೊಳಲುವಾದನ,ಭಜನೆ ಉಚಿತ ತರಗತಿಗಳು ಪ್ರತೀ ಮಂಗಳವಾರ ಸಾಯಾಂಕಾಲ ನಡೆಯುತ್ತಿವೆ. ಇದಲ್ಲದೆ ಸತ್ಸಂಗ ಕಾರ್ಯ ಕ್ರಮಗಳು ನಡೆಯುತ್ತವೆ.