ಕೈಕಂಬ: ಪೊಳಲಿ ರಾಮಕೃಷ್ಣತಪೋವನದಲ್ಲಿ 7 ದಿನಗಳ ಭಾಗವತ ಸಪ್ತಾಹವು ಆ.5ರಂದು ಬುಧವಾರ ಪ್ರಾರಂಭಗೊಂಡಿತು.
ಶಿವನಹಳ್ಳಿ ರಾಮಕೃಷ್ಣ ಆಶ್ರಮದ ಶ್ರೀ ಸೌಖ್ಯಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಭಾಗವತ ಸಪ್ತಾಹವನ್ನು ಶ್ರಾವಣ ಮತ್ತು ಅನುಷ್ಠಾನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುವುದು ಭಗವಂತನ ನಾಮಸ್ಮರಣೆಯಲ್ಲಿ ಅದ್ಬುತ ಶಕ್ತಿಯಿರುವುದೆಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಪ್ರವಚನವನ್ನು ಕೋಡಿಮಜಲು ವಿದ್ವಾನ್ ಅನಂತಪದ್ಮನಾಭ ಉಪಧ್ಯಾಯ ಶ್ರೀಮದ್ ಭಾಗವತದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ಸ್ವಾಮಿ ಪದ್ಮಪಾದಾನಂದ, ಶ್ರೀಪತಿ ಭಟ್, ಬ್ರಹ್ಮಚಾರಿ ಶಶಿಮಹರಾಜ್ ಉಪಸ್ಥಿತರಿದ್ದರು. ಭಾಗವತ ಸಪ್ತಾಹವು ಆ.5ರಿಂದ ಆ.5ರಿಂದ ಸಂಜೆ 6ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ 7ದಿನಗಳ ಸಪ್ತಾಹವು ನಡೆಯಲಿದೆ.







