ಕೈಕಂಬ: ಪೊಳಲಿ ರಾಮಕೃಷ್ಣತಪೋವನದಲ್ಲಿ 7 ದಿನಗಳ ಭಾಗವತ ಸಪ್ತಾಹವು ಆ.5ರಂದು ಬುಧವಾರ ಪ್ರಾರಂಭಗೊಂಡಿತು.
ಶಿವನಹಳ್ಳಿ ರಾಮಕೃಷ್ಣ ಆಶ್ರಮದ ಶ್ರೀ ಸೌಖ್ಯಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಭಾಗವತ ಸಪ್ತಾಹವನ್ನು ಶ್ರಾವಣ ಮತ್ತು ಅನುಷ್ಠಾನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುವುದು ಭಗವಂತನ ನಾಮಸ್ಮರಣೆಯಲ್ಲಿ ಅದ್ಬುತ ಶಕ್ತಿಯಿರುವುದೆಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

4

9

11

12

1

2

3

 

8

ಪ್ರವಚನವನ್ನು ಕೋಡಿಮಜಲು ವಿದ್ವಾನ್ ಅನಂತಪದ್ಮನಾಭ ಉಪಧ್ಯಾಯ ಶ್ರೀಮದ್ ಭಾಗವತದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ಸ್ವಾಮಿ ಪದ್ಮಪಾದಾನಂದ, ಶ್ರೀಪತಿ ಭಟ್, ಬ್ರಹ್ಮಚಾರಿ ಶಶಿಮಹರಾಜ್ ಉಪಸ್ಥಿತರಿದ್ದರು. ಭಾಗವತ ಸಪ್ತಾಹವು ಆ.5ರಿಂದ ಆ.5ರಿಂದ ಸಂಜೆ 6ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ 7ದಿನಗಳ ಸಪ್ತಾಹವು ನಡೆಯಲಿದೆ.

 

By suddi9

Leave a Reply

Your email address will not be published. Required fields are marked *