ಗುರುಪುರ ಕೈಕಂಬ: ಗುರುಪುರ – ಸುರತ್ಕಲ್ ಹೋಬಳಿಯಲ್ಲಿ ಗ್ರಾಮ ಪಂಚಾಯತ್‍ಗಳಿಗೆ ಆಯ್ಕೆಯಾದ ಮುಂಡಾಲ ಸಮಾಜದ ಬಾಂಧವರಾದ ಶ್ರೀಮತಿ ಸುಮತಿ ಸಾಲಿಯಾನ್, ಶ್ರೀಮತಿ ಮೀನಾಕ್ಷಿ ಕರ್ಕೇರ, ಶ್ರೀಮತಿ ಶಾಂಭವಿ ಹಾಗೂ ಶ್ರೀಮತಿ ಕಮಲಾಕ್ಷಿ ಕಾಜಿಲರವರನ್ನು ಇತ್ತೀಚೆಗೆ ಕಂದಾವರ ಪದವಿನಲ್ಲಿ ನಡೆದ ಆಟಿಯ ಕೂಟದಲ್ಲಿ ಸನ್ಮಾನಿಸಲಾಯ್ತು.
IMG-20150803-WA0010 copyಸಮಾಜ ಬಾಂಧವರು ಇಂದು ಎಲ್ಲಾ ರಂಗಗಳಲ್ಲಿಯೂ ಮುಂದುವರಿಯುತ್ತಿದ್ದಾರೆ. ಅಂತೆಯೇ ರಾಜಕೀಯದಲ್ಲೂ ಮುಂದುವರಿಯಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಅದ್ಯಪಾಡಿ ಮೋನಪ್ಪ ಗುರಿಕಾರರು ಕರೆ ನೀಡಿದರು.
ವೇದಿಕೆಯಲ್ಲಿ ಬಿ ಎಸ್ ವಸಂತ್ ಕುಮಾರ್, ಸೋಮಯ್ಯ ಬೆಳ್ಳೂರು, ಆನಂದ ಕರ್ಕೇರ ಗುರಿಕಾರ, ರೋಹಿತಾಕ್ಷ ಅಂಗಡಿಗುಡ್ಡೆ, ದೇವೇಂದ್ರ ಕಾಪಿಕಾಡ್, ಸೀತಾರಾಮ ಎಚ್ ಬಿ ರವರು ಉಪಸ್ಥಿತರಿದ್ದರು. ಆನಂದ ಕಾಜಿಲರವರು ಅಧ್ಯಕ್ಷತೆ ವಹಿಸಿದ್ದರು. ಕು ರಮ್ಯಾ ಸ್ವಾಗತಿಸಿದರು. ಕು.ಪ್ರಜ್ಞಾ ಪ್ರಾರ್ಥಿಸಿದರು. ಜಯಂತ ಮಾಸ್ಟರ್ ಮತ್ತು ವಿಠಲ ಆಳ್ವರವರು ಕಾರ್ಯಕ್ರಮ ನಿರ್ವಹಿಸಿದರು. ದೇವು ಕುಮಾರ್ ವಂದಿಸಿದರು.
ಈ ಸಂಧರ್ಭದಲ್ಲಿ ಇತ್ತೀಚೆಗೆ ಅಗಲಿದ ಮಾಜಿ ರಾಷ್ಟ್ರಪತಿಗಳಾದ ಡಾ!ಎ.ಪಿ,ಜೆ ಅಬ್ದುಲ್ ಕಲಾಂರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

By suddi9

Leave a Reply

Your email address will not be published. Required fields are marked *