ಕೈಕಂಬ: ಮಳೆಗಾಲ ಕಳೆದು ಪೈರುಗಳೆಲ್ಲಾ ಕಟಾವಿಗೆ ಬರುವ ಸಮಯ. ಈ ಸಮಯ ಇಳೆ ನಾನಾ ಬಣ್ಣಗಳಿಂದ ಕಂಗೊಳಿಸುತ್ತದೆ. ಪ್ರಕೃತಿ ಸಹಜವಾದ ಕಾಡು ಪ್ರದೇಶಗಳು ಬಣ್ಣಬಣ್ಣದ ಹೂಗಳಿಂದ ಉದ್ಯಾನವನದಂತೆ ಶೃಂಗಾರಗೊಂಡಿರುತ್ತದೆ.
ಸಾಮಾನ್ಯವಾಗಿ ಪೊದೆಗಳಲ್ಲಿ, ಕಾಡುಗಳಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಈ ಹೂಗಳ ಸೌಂದರ್ಯವನ್ನು ಗಮನಿಸಿದರೆ ಕವಿಹೃದಯ ಮೈಮಿಡಿಯುತ್ತದೆ. ಯಾವ ಹೂಗಳಿಗಿಂತಲೂ ಕಮ್ಮಿ ಇಲ್ಲದಂತೆ ಕಂಡುಬರುವ ಹೂಗಳ ಝಳಕ್ ಇಲ್ಲದೆ.

























