ಪೊಳಲಿ:ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಕರಿಯಂಗಳ ಹತ್ತುಸಮಸ್ತರ ಯಕ್ಷಗಾನಕ್ಕೆ ಇದೀಗ 37 ವರ್ಷ ತುಂಬಿದೆ. ಯಕ್ಷಗಾನದ ರಂಗಸ್ಥಳಕ್ಕೆ ಸುಮಾರು ವರ್ಷಗಳಿಂದ ಲೈಟಿಂಗ್ ಅಲಂಕಾರವನ್ನು ಮಾಡುತ್ತಿದ್ದ ಧರ್ಮಪಾಲ ಇಂದ್ರ ಅವರನ್ನು ಯಕ್ಷಗಾನದ ಸಂದರ್ಭದಲ್ಲಿ ಕರಿಯಂಗಳದ ಹತ್ತು ಸಮಸ್ತರು ಸೇರಿ ಸನ್ಮಾನಿಸಿದರು.


ಅವರು ನಿರಂತರ 37 ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ನಿವೃತಿಹೊಂದಲಿರುವ ಅವರನ್ನು ಯಕ್ಷಗಾನದ ಸಂದರ್ಭದಲ್ಲಿ ರಾಮಚಂದ್ರ ತುಂಗ ಹಾಗೂ ವೆಂಕಟೇಶ್ ನಾವಡ ಪೊಳಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗಂಗಯ್ಯ ಕೋಟ್ಯಾನ್, ಗೋಪಾಲ ಪೂಜಾರಿ, ಉಮೇಶ ಆಚಾರ್ಯ, ಗಂಗಯ್ಯ ಪೂಜಾರಿ ,ರಾಜು ಕೋಟ್ಯಾನ್ ನಡುಮನೆ ಮತ್ತಿತರರು ಉಪಸ್ಥಿತರಿದ್ದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
