ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ದಶಮಾನೋತ್ಸವದ ಪ್ರಯುಕ್ತ ಮೇ 10 ರಂದು ಶುಕ್ರವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಚಂಡಿಕಾಹೋಮ ನಡೆಯಲಿದೆ.ರಾಣೆಬೆನ್ನೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಇದರ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಆಶೀರ್ವಚನ ನೀಡಲಿದ್ದಾರೆ.
ಮಧ್ಯಾಹ್ನ 1.30 ರಿಂದ ಯಕ್ಷಗಾನ ತಾಳಮದ್ದಳೆ “ರಣವೀಳ್ಯ” ಯಕ್ಷ ಶಿಕ್ಷಕವೃಂದ ಬೆಂಜನಪದವು ಇವರಿಂದ ಸಂಜೆ 5 ರಿಂದ 5.45 ರವರೆಗೆ ಕಾಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾಂಸರಾದ ಡಾ. ಸುರೇಶ್ ಧರ್ಮಸ್ಥಳ ಮತ್ತು ಬಳಗ ವಾದ್ಯ ವೈಭವ , ಜೀವಂತ ದುರ್ಗಾಪೂಜೆ ಬಡ ಮಾತೆಯರಿಗೆ ಸೀರೆ, ಅನ್ನ ತಟ್ಟೆ ಇತ್ಯಾದಿಗಳ ವಿತರಣೆ ನಡೆಯಲಿದೆ ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ತಿಳಿಸಿದ್ದಾರೆ.