ಕೈಕಂಬ:ಕುಡಿಯುವ ನೀರಿನ ಸಮಸ್ಯೆಯನ್ನು ನಿಮ್ಮಿಂದ ಬಗೆಹರಿಸಲು ಸಾಧ್ಯವಾಗದಿದ್ದರೆ. ಸಾಮೂಹಿಕವಾಗಿ ರಾಜಿಕೊಟ್ಟು ಹೋಗಿ ಎಂದು ಗ್ರಾಮಸ್ಥರು ಪಂಚಾಯತ್ ಸದಸ್ಯರಿಗೆ ಚಾಚಿ ಬೀಸಿದ ಘಟನೆ ಕುಪ್ಪೆಪದವು ಪಂಚಾಯತ್‍ನ ಗ್ರಾಮ ಸಭೆಯಲ್ಲಿ ನಡೆದಿದೆ.ಕುಪ್ಪೆಪದವು ಪಂಚಾಯತ್‍ನ ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆದ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮಾತಾನಾಡಿದ ಗ್ರಾಮಸ್ಥರು ಪಡೀಲ್ ಪದವು ಎಂಬಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರ ಅನುದಾನದಲ್ಲಿ ಬೋರ್‍ವೆಲ್ ಕೊರೆದು 2 ತಿಂಗಳಾದರೂ ಅದಕ್ಕೆ ಪಂಪ್ ಅಳಡಿಸದೇ ನೀರಿಲ್ಲದ ಹಳೇ ಬೋರ್‍ವೆಲ್ಗೆ ಅಳವಡಿಸಲಾಗಿದೆ.

IMG-20190710-WA0027ಮಳೆಯೂ ಸಾಕಷ್ಟು ಪ್ರಮಾಣದಲ್ಲಿ ಆಗದಿರುವಿದರಿಂದ ಕೆಲವು ಸ್ಥಳಗಳಲ್ಲಿ ಈಗಲೂ ಕುಡಿಯುವ ನೀರಿಗೆ ಸಮಸ್ಯೆ ಇದೆ. ಪಂಚಾಯತ್ ಈ ಬಗ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರಫೀಕ್ ಅಚಾರಿಜೋರ ಕುಡಿಯುವ ನೀರಿನ ಸಮಸ್ಯೆಯನ್ನು ನಿಮ್ಮಿಂದ ಬಗೆಹರಿಸಲು ಸಾಧ್ಯವಾಗದಿದ್ದರೆ ಸಾಮೂಹಿಕವಾಗಿ ರಾಜಿನಾಮೆ ಕೊಟ್ಟು ಹೋಗಿ ಎಂದು ಅಕ್ರೋಶಿತರಾಗಿ ನುಡಿದರು.

IMG-20190710-WA0028
ಮೆಸ್ಕಾಂಗೆ ತರಾಟೆ:ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ, ಅಚಾರಿಜೋರ ಅಂಗನವಾಡಿ ಸಮೀಪದಲ್ಲಿ ವಿದ್ಯುತ್ ಕಂಬವಾಲಿಕೊಂಡಿದ್ದು ಬದಲಾಯಿಸುವಂತೆ ಮನವಿ ಮಾಡಿದ್ದೆ ಆದರೂ ಬದಲಾಯಿಸಿಲ್ಲ. ಪ್ರತಿ ಗ್ರಾಮ ಸಭೆಗೂ ಜೆ.ಇಗಳು ಬದಲಾಗುತ್ತಾರೆ. ಸಮಸ್ಯೆ ಹೇಳಿದರೂ ಪರಿಹಾರವಾಗುತ್ತಿಲ್ಲ ಎಂದು ಮೆಸ್ಕಾಂ ವಿರುದ್ಧ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು. ಕೆಂಪುಗುಡ್ಡೆ ಎಂಬಲ್ಲಿ ನಿವೇಶನ ಹಂಚಿಕೆ ಮಾಡಿದ್ದು ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ. ಎಲ್ಲೆಲ್ಲೊ ಇದ್ದವರಿಗೆಲ್ಲಾ ನಿವೇಶನ ಹಂಚಿಕೆ ಮಾಡಲಾಗಿದೆ.ನಿವೇಶನ ಹಂಚಿಕೆ ವೇಳೆ ನಿಯಾಮವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಗ್ರಾಮಸ್ಥರು ಅರೋಪ ಮಾಡಿದಾಗ ತೀವೃ ಮಾತಿನ ಚಕಮಕಿ ನಡೆಯಿತು.

IMG-20190710-WA0029ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯದ ವಿಲೇವಾರಿ ಸಮರ್ಕವಾಗಿಲ್ಲ ಅಲ್ಲದೆ ಚರಂಡಿಗಳ ಹೊಳೆತ್ತಿಲ್ಲ ಚರಂಡಿಗಳಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ ಕೊಳಚೆನೀರು ಶೇಖರಣೆಯಾಗಿ ದುರ್ನಾತ ಬೀರುತ್ತಿದೆ. ಅದರಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆಯ ಮುಂಬಾಗದಲ್ಲಿಯೂ ಈ ದುರವಸ್ಥೆ ಇದೇ ಎಂದು ಸಭೆಯಲ್ಲಿ ದೂರಿದರು. ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಮುಚ್ಚೂರು ತಾ.ಪಂ.ಸದಸ್ಯ ನಾಗೇಶ್ ಶೆಟ್ಟಿ, ಪ್ರಾಥಮಿಕ ಆರೋಗ್ಯಕೇಂದ್ರ ವೈದ್ಯ ಡಾ.ಕಿರಣ್ ರಾಜ್, ಇಂಜಿನಿಯರ್ ವಿಶ್ವನಾಥ್, ಸಮಾಜ ಕಲ್ಯಾಣ ಇಲಾಖೆಯ ಮಾಲಿನಿ, ಪಶುವೈದ್ಯಾಧಿಕಾರಿ ಡಾ.ಪ್ರಸಾದ್, ಗ್ರಾಮಕರಣಿಕ ದೇವರಾಜ್, ಬ್ಯಾಂಕ್ ಆಫ್ ಬರೋಡ(ವಿಜಯಾಬ್ಯಾಂಕ್)ಶಾಖೆಯ ಮ್ಯಾನೇಜರ್ ಸಂತೋಷ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.ಪಂಚಾಯತ್ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಪಂ.ಅಭಿವೃದ್ಧಿ ಸವಿತಾ ಮುದೋಳಿಕರ್ ಸಭೆಯನ್ನು ನಡೆಸಿಕೊಟ್ಟರು. ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರದೀಪ್ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದರು.

 

By suddi9

Leave a Reply

Your email address will not be published. Required fields are marked *