ಕೈಕಂಬ : ಎಡಪದವು ಜಂಕ್ಷನಿನಲ್ಲಿ ರಾಷ್ಟ್ರೀಯ ಹೆದ್ದಾರಿ(169) ಮೋರಿ ಕುಸಿದು, ಹೆದ್ದಾರಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಸದ್ಯ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ಅರ್ಧ ರಸ್ತೆಯಲ್ಲಿ ವಾಹನಗಳು ಮುಂದುವರಿಯುತ್ತಿವೆ.
ಅತಿ ಹಳೆಯದಾದ ಮೋರಿ ನೀರಿನ ರಭಸಕ್ಕೆ ನೆಲಕ್ಕೆ ಕುಸಿದಿದೆ. ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ವಾಹನ ದಟ್ಟಣಿ ಹೆಚ್ಚಿರುವ ಇಲ್ಲಿ ಮಳೆ ನಿಂತ ಬಳಿಕ, ರಾತ್ರಿ ವೇಳೆ ದುರಸ್ತಿ ಕಾರ್ಯ ನಡೆಸಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಸಹಾಯಕ ಇಂಜಿನಿಯರ್ ಮುರುಗೇಶ್ ತಿಳಿಸಿದರು.
ಘಟನಾ ಸ್ಥಳಕ್ಕೆ ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗೋಪಾಲ, ಮಾಜಿ ಉಪಾಧ್ಯಕ್ಷ ಪ್ರಸಾದ್, ಸದಸ್ಯರಾದ ನಾಗೇಶ್ ನಾಯ್ಕ್, ಸುಕುಮಾರ್, ರಾಮಚಂದ್ರ ಪೂಜಾರಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು.