ಕೈಕಂಬ: ಪ್ರಕೃತಿಗೆ ಯಾರಲ್ಲೂ ದ್ವೇಷವಿಲ್ಲ ಪ್ರಕೃತಿಯನ್ನು ಉಳಿಸಿ ಬೆಳೆಸುವ ಅರಿವು ನಮಗಿಲ್ಲದ ಪರಿಣಾಮ ಈ ಅನಾಹುತಗಳಿಗೆ ಕಾರಣ ವಾಗಿದೆ   ದುಡ್ಡು ಮಾತ್ರ ಸಂಪತ್ತಲ್ಲ ಎಂಬುದನ್ನು ನಾವು ತಿಳಿದಿರಬೇಕು , ಜಲ ಮೂಲಗಳನ್ನು ನಾವು ಕಾಪಾಡಬೇಕು ಕೆರೆ , ಕಟ್ಟೆ ಗಳು ತ್ಯಾಜ್ಯ ಸಂಗ್ರಹ ಗಳಾಗುವುದು ಖೇದಕರ , ನಮ್ಮ ಜಿಲ್ಲೆ ಪ್ರಾಕೃತಿಕವಾಗಿ ಶ್ರೀಮಂತವಾಗಿದೆ ಅದರ ಸ್ವಚ್ಛತೆಯನ್ನು ಕಾಪಾಡುವ ಕೆಲಸ ನಮ್ಮಿಂದಾಗಲಿ ಎಂದು  ಮಹಾವೀರ ಅಜ್ರಿ ಹೇಳಿದರು .IMG_9324_resize

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ಇದರ ಮಾರ್ಗದರ್ಶನ ಹಾಗು ಆರ್ಥಿಕ ಸಹಕಾರದೊಂದಿಗೆ ಕೆರೆ ಅಭಿವೃದ್ಧಿ ಸಮಿತಿ ನೆತ್ತರಕೆರೆ ಇದರ ಸಹಭಾಗಿತ್ವದೊಂದಿಗೆ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ದಡಿ ಪುನಶ್ಚೇತನ ಗೊಳಿಸಲಾದ ಪುದು ಗ್ರಾಮ ದ ನೆತ್ತರಕೆರೆ ಗೆ ಬಾಗಿನ ಅರ್ಪಣೆ ಕಾರ್ಯಕ್ರಮ ದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು IMG_9415_resize

ಕಾರ್ಯಕ್ರಮ ವನ್ನು ಪುದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಉದ್ಘಾಟಿಸಿ  ಮಾತನಾಡಿದ ಅವರು ಗ್ರಾಮದಲ್ಲಿ ಉತ್ತಮವಾದ ನೀರಿನ ಮೂಲ ವಿದ್ದಲ್ಲಿ ಕೃಷಿ ಅಭಿವೃದ್ಧಿ ಯಾಗುತ್ತದ  ಈಗಾಗಲೇ ಜಿಲ್ಲಾ ಪಂಚಾಯತ್ ಅನುದಾನ ದಿಂದ ೨ ಲಕ್ಷ ರೂಪಾಯಿಗಳನ್ನು ಈ ಕೆರೆ ಯ ತಡೆಗೋಡೆ ಗೆ ವಿನಿಯೋಗಿಸಲಾಗಿದೆ ಎಂದರು .IMG_9432_resize

IMG_9355_resize

IMG_9435_resize

IMG_9465_resizeಕೆರೆ ಅಭಿವೃದ್ಧಿ ಸಮಿತಿ ನೆತ್ತರಕೆರೆ ಅಧ್ಯಕ್ಷ  ಹಾಗೂ ಗ್ರಾ.ಪಂ ಸದಸ್ಯ ಸಂತೋಷ್ ಕುಮಾರ್ ಅದ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಪದ್ಮಶ್ರೀ ದುರ್ಗೇಶ್ ಶೆಟ್ಟಿ ತಾಲೂಕು ಪಂಚಾಯತ್ ಸದಸ್ಯೆ ,  ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ , ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ , ಬಂಟ್ವಾಳ ತಾಲೂಕು ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಮಾದವ ವಳವೂರು , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ , ನವೋದಯ ಮಿತ್ರ ಕಲಾ ವೃಂದ ದ ಅಧ್ಯಕ್ಷ ಸುರೇಶ ಭಂಡಾರಿ ಅರ್ಭಿ , ನೆತ್ತರಕೆರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ನೆತ್ತರಕೆರೆ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಫರಂಗಿಪೇಟೆ ಒಕ್ಕೂಟ ದ ಅಧ್ಯಕ್ಷ ಪದ್ಮನಾಭ , ಮತ್ತಿತರರು ಉಪಸ್ಥಿತರಿದ್ದರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಯೋಜನಾಧಿಕಾರಿ  ಜಯಾನಂದ ಪಿ . ಸ್ವಾಗತಿಸಿ ದರು , ದಾಮೋದರ ನೆತ್ತರಕೆರೆ ವಂದಿಸಿದರು , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕರಾದ ಜನಾರ್ಧನ ರವರು ನಿರೂಪಿಸಿರದರುIMG_9487_resize

IMG_9483_resize

IMG_9452_resize

IMG_9461_resize

By suddi9

Leave a Reply

Your email address will not be published. Required fields are marked *