ಕೈಕಂಬ:ಹೊಲಿಗೆ ಯಂತ್ರಗಳ ಮೂಲಕ ಬೃಹತ್ ಉದ್ದಿಮೆಯಲ್ಲಿ ಮುಂದುವರಿಯುವ ಮಹಿಳೆಯರ ಗುಂಪುಗಳಿಗೆ ಇಲಾಖೆ 25 ಲಕ್ಷದಿಂದ ಐದು ಕೋಟಿ ರೂವರೆಗೆ ಸಹಾಯಧನ ನೀಡುತ್ತದೆ. ಈ ಮೂಲಕ ಮಹಿಳೆಯರು ಸ್ವಂತ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಅರವಿಂದ ಪ್ರಭು ಹೇಳಿದರು . ಇಲ್ಲಿ ಕಳೆದ 10 ವರ್ಷದಿಂದ ಹೊಲಿಗೆ ತರಬೇತಿ ನೀಡಲಾಗುತ್ತಿದೆ. ಪ್ರತಿ ತಂಡದಲ್ಲಿ 18-35 ವರ್ಷ ವಯೋಮಿತಿಯ 50 ಮಂದಿಗೆ ಹೊಲಿಗೆ ತರಬೇತಿ ನೀಡಲಾಗುತ್ತಿದೆ. 45 ದಿನಗಳ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಇಲಾಖೆ ವತಿಯಿಂದ 3,500 ರೂ ಸಂಭಾವನೆ ನೀಡಲಾಗುತ್ತದೆ. ತರಬೇತಿ ಹೊಂದಿದ ಕೆಲವರು ಮಹಿಳೆಯರು ದಾಮೋದರ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದವರಿಗೆ ಸ್ವ-ಉದ್ಯೋಗ ಕಲ್ಪಿಸಲು ಸಂಸ್ಥೆ ಎಲ್ಲ ರೀತಿಯ ಸಹಾಯ ಮಾಡುತ್ತಿದೆ.

12vp 3 pramanapthra

ಪ್ಲಾಸ್ಟಿಕ್ ನಿಷೇಧಗೊಳ್ಳಬಹುದಾದ ಈ ಹಂತದಲ್ಲಿ ಸಂಸ್ಥೆ ಮಹಿಳೆಯರಿಗಾಗಿ ಬಟ್ಟೆ ಚೀಲ ತಯಾರಿಸುವ ಯೋಜನೆಯೊಂದು ರೂಪಿಸಿದ್ದು, ಇದರಲ್ಲಿ ಆಸಕ್ತರು ಕೈಜೋಡಿಸಬಹುದೆಂದು ಹೇಳಿದರು. ಅವರು ಗುರುಪುರದ ಶ್ರೀ ದಾಮೋದರ ಗಾರ್ಮೆಂಟ್ಸ್ ಟ್ರೈನಿಂಗ್ ಸೆಂಟರ್ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಮಂಗಳೂರು ಸಂಯುಕ್ತಾಶ್ರಯದಲ್ಲಿ ಕೈಗೊಳ್ಳಲಾದ ಹೊಲಿಗೆ ಯಂತ್ರ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಸೆ. 12ರಂದು ಟ್ರೈನಿಂಗ್ ಸೆಂಟರಿನಲ್ಲಿ ಪ್ರಮಾಣಪತ್ರ ವಿತರಣಾ ಸಂದರ್ಭದಲ್ಲಿ ಮಾತನಾಡಿದರು.12vp pramanapathra

ಗುರುಪುರ ಗ್ರಾ.ಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು ಮುಂದಿನ ತಿಂಗಳಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೊಳ್ಳುವ ಸಾಧ್ಯತೆಗಳಿವೆ. ಆಗ ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಚೀಲಗಳಿಗೆ ಬೇಡಿಕೆ ಬರಲಿದ್ದು, ಹೊಲಿಗೆ ತರಬೇತಿ ಪಡೆದ ಮಹಿಳೆಯರು ಸರ್ಕಾರದ ನೆರವಿಂದ ಹೊಲಿಗೆಯಂತ್ರ ಖರೀದಿಸಿ ಬಟ್ಟೆ ಚೀಲಗಳ ಹೊಲಿಗೆ ಕ್ಷೇತ್ರದಲ್ಲಿ ಮುಂದುವರಿಯಬಹುದು ಎಂದು ಹೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಶಿವಶಂಕರ್ ಮಾತನಾಡುತ್ತ, ಇದು ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸುವ ಯೋಜನೆಯಾಗಿದ್ದು, ಇಲ್ಲಿ ತರಬೇತಿ ಹೊಂದಿದವರು ಹೊಲಿಗೆ ಯಂತ್ರ ಖರೀದಿಸಿ ಸ್ವಂತ ಉದ್ಯೋಗ ನಡೆಸುವುದಿದ್ದರೆ `ನಿಧಿ’ ಯೋಜನೆಯಡಿ ಇಲಾಖೆ 15 ಸಾವಿರ ರೂ ಸಹಾಯಧನ ನೀಡುತ್ತದೆ. ಇದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಸರ್ಕಾರದ ವತಿಯಿಂದ ಜಿಲ್ಲೆಯ ಗುರುಪುರ ಹೊರತುಪಡಿಸಿ ಅತ್ತಾವರ, ಬೆಳ್ತಂಗಡಿ, ಬೆಳ್ಳಾರೆ ಮತ್ತು ಕಲ್ಲಡ್ಕದಲ್ಲಿ ಇಂತಹ ಹೊಲಿಗೆ ತರಬೇತಿ ಕೇಂದ್ರಗಳಿವೆ ಎಂದರು.

ಈ ಸಂದರ್ಭದಲ್ಲಿ ಪ್ರಮಾಣಪತ್ರ ಸ್ವೀಕರಿಸಿದ ಕೆಲವು ಮಹಿಳೆಯರು ಹೊಲಿಗೆ ಯಂತ್ರ ಖರೀದಿಸಿ, ಸ್ವ-ಉದ್ಯೋಗದಲ್ಲಿ ಮುಂದುವರಿಯುವ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಅರವಿಂದ ಪ್ರಭು ಸ್ವಾಗತಿಸಿದರು. ತರಬೇತುಗಾರ್ತಿ ಹಂಸಾ ಎಸ್ ಶೆಟ್ಟಿ ವಂದಿಸಿದರು.

ಪ್ಲಾಸ್ಟಿಕ್ ನಿಷೇಧಗೊಂಡರೆ ಸ್ವಲ್ಪ ಸಮಯ ಕಷ್ಟವಾಗಬಹುದು. ಪ್ಲಾಸ್ಟಿಕ್‍ಗಿಂತಲೂ ಕಡಿಮೆ ವೆಚ್ಚದಲ್ಲಿ ಹೆಚ್ಚು ಬಾಳಿಕೆಯ ಬಟ್ಟೆ ಚೀಲಗಳು ನಮ್ಮಲ್ಲಿವೆ. ಇಲ್ಲಿ ತಯಾರಿಸಲಾದ ಪರಿಸರ-ಸ್ನೇಹಿ ಬಟ್ಟೆ ಚೀಲವೊಂದರಲ್ಲಿ ಗ್ರಾಹಕರು ಏಕಕಾಲದಲ್ಲಿ ಸೊಪ್ಪು-ತರಕಾರಿ ಹಾಗೂ ಇತರ ಸೊತ್ತು ತುಂಬಿಸಿ ಕೊಂಡೊಯ್ಯಲು ಸಾಧ್ಯವಿದೆ. ಈ ಚೀಲದೊಳಗೆ ಕೆಲವು ಪ್ರತ್ಯೇಕ ಸಣ್ಣ ಚೀಲಗಳಿವೆ. ಇದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ ಎಂದು ಅರವಿಂದ ಪ್ರಭು ಪರಿಸರ-ಸ್ನೇಹಿ ಬಟ್ಟೆ ಚೀಲ ಅನಾವರಣಗೊಳಿಸಿ, ಮಾಹಿತಿ ನೀಡಿದರು.

By suddi9

Leave a Reply

Your email address will not be published. Required fields are marked *