ಕೈಕಂಬ: ದೇಶದಲ್ಲಿ ಬದಲಾವಣೆ ಅಗತ್ಯವಿದೆ. ಮಕ್ಕಳಿಗೆ ಧರ್ಮ ಹಾಗೂ ಸಂಸ್ಕಾರದ ಬಗ್ಗೆ ತಿಳಿಸಿಕೊಟ್ಟಾಗ ಧಾರ್ಮಿಕವಾಗಿ ಬದಲಾವಣೆ ತರಲು ಸಾಧ್ಯವಿದೆ. ನಾಗರಿಕ ಸಮಾಜದಲ್ಲಿ ಇಂತಹ ಕೆಲಸಗಳು ಆಗಬೇಕಿದೆ. ಅಲ್ಲದೆ ಸ್ವಾಮೀಜಿ ಹೇಳಿದಂತೆ ದೇಶ ಪ್ಲಾಸ್ಟಿಕ್ ಮುಕ್ತಗೊಳ್ಳಬೇಕು. ಎಲ್ಲರೂ ಮನಸ್ಸು ಮಾಡಿದರೆ ಇದು ಸಾಧ್ಯ. ಪ್ಲಾಸ್ಟಕ್ ಮಣ್ಣಿನಲ್ಲಿ ಕರಗುವುದಿಲ್ಲ. ಇದರಿಂದ ಮಣ್ಣಿನ ಫಲವತ್ತತೆ ನಷ್ಟವಾಗುತ್ತದೆ. ಆದ್ದರಿಂದ ಗ್ರಾಮಸ್ಥರು ಪ್ಲಾಸ್ಟಿಕ್ ಚೀಲಗಳಿಂದ ಮುಕ್ತರಾಗಿ ಬಟ್ಟೆಚೀಲಗಳ ಬಳಕೆ ಮನಸ್ಸು ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.20vpdharmikakaryakrama

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಠ್ (ರಿ) ಬಂಟ್ವಾಳ ಪ್ರಗತಿ ಬಂಧು ಸ್ವ-ಸಹಾಯಸಂಘಗಳ ಒಕ್ಕೂಟ ತುಂಬೆ ವಲಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾಸಮಿತಿ ಪೊಳಲಿ ಇವರ ಸಹಯೋಗದೊಂದಿಗೆ ಅ.20ರಂದು ಭಾನುವಾರ ಪೊಳಲಿ ಸರ್ವಮಂಗಳ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.20-rajesh nayak

ನಂತರ ಮಾತನಾಡಿದ ಸ್ವಾಮೀಜಿ ಸ್ವಚ್ಛ ಭಾರತದ ಕನಸು ಗಾಂಧೀಜಿಯವರ ಕನಸು. ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್ ಸಾಕಷ್ಟು ಕೆಲಸ ಮಾಡುತ್ತಿದೆ. ಇಂತಹ ಸಾಮಾಜಿಕ ಹಿತಾಸಕ್ತಿಯ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು. ನಮ್ಮ ಸುತ್ತಲ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು.20 -01

ಧಾರ್ಮಿಕ ಉಪನ್ಯಾಸದಲ್ಲಿ ಹಸಿವಿನಲ್ಲಿ, ಹೊಟ್ಟೆ ಹಸಿವು ಮತ್ತು ಹಣದ ಹಸಿವು ಇದೆ. ಹೊಟ್ಟೆ ಹಸಿವು ತೀವ್ರವಾದಾಗ ಹಣದ ಹಸಿವು ತೂಗಿಸಿಕೊಳ್ಳಲು ಆಗುವುದಿಲ್ಲ. ಯಾವುದು ಧರ್ಮ ಮತ್ತು ಯಾವುದು ಧಾರ್ಮಿಕತೆ ಎಂಬುದನ್ನು ತಿಳಿದುಕೊಳ್ಳಬೇಕು. ಧಾರಣೆಯಲ್ಲಿ ಧರ್ಮವಿದೆ. ಯಾವುದು ಸರಿ ಎಂಬುವುದು ತೋರಿಸಿ ಕೊಡುವುದೇ ಧರ್ಮ. ಇವನ್ನೊಳಗೊಂಡ ವಿಚಾರಧಾರೆಯೇ ಧಾರ್ಮಿಕತೆ ಉಪನ್ಯಾಸದಲ್ಲಿ ವಾದಿರಾಜ ಕಲ್ಲೂರಾಯ ಹೇಳಿದರು .

20vadiraya kaluraya

20vpdharmika karyakrama
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾವಿಧಿವಿದಾನಗಳನ್ನು ರಾಜಶೇಖರ್ ಭಟ್ ಮತ್ತು ಸುರೇಶ್ ಭಟ್ ನೆರವೇರಿಸಿದರು. ಧಾರ್ಮಿಕ ಕಾರ್ಯಕ್ರಮವನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರ ದಿವ್ಯಸಾನಿಧ್ಯದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ದೀಪ ಪ್ರಜ್ವಲನೆ ಗೊಳಿಸಿದರು. ಅಧ್ಯಕ್ಷತೆಯನ್ನು ಬಂಟ್ವಾಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಮಾಧವ ವಳವೂರು ವಹಿಸಿದ್ದರು.ಧಾರ್ಮಿಕ ಉಪನ್ಯಾಸವನ್ನು ಕಿನ್ನಿಕಂಬಳ ವಾದಿರಾಜ ಕಲ್ಲೂರಾಯ ನೀಡಿದರು.

20-3

20-2

20-1ಮುಖ್ಯ ಅತಿಥಿಗಳಾಗಿ ಶ್ರೀಕ್ಷೇ.ಧ.ಗ್ರಾ.ಯೂಜನೆ ಬಿ.ಸಿ.ಟ್ರಸ್ಟ್ ಉಡುಪಿ ಪ್ರಾದೇಶೀಕ ನಿರ್ದೇಶಕ ಮಹಾವೀರ ಅಜ್ರಿ, ಕರಿಯಂಗಳ ಗ್ರಾ. ಪಂ.ಅಧ್ಯಕ್ಷೆ ಚಂದ್ರಾವತಿ, ತಾ.ಪಂ.ಸದಸ್ಯ ಯಶವಂತ ಕೋಟ್ಯಾನ್, ತುಂಬೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಸದಾನಂದ ಆಳ್ವ, ಉದ್ಯಮಿಗಳಾದ ಜಯರಾಮ ಕೃಷ್ಣ ಪೊಳಲಿ, ರೋಶನ್ ಅಮೀನ್ ಪುಂಚಮೆ ಮತ್ತಿತರರು ಉಪಸ್ಥಿತರಿದ್ದರು. ರೇಖಾ ಶೆಟ್ಟಿ ಸ್ವಾಗತಿಸಿ, ಜನಾರ್ಧನ ಆಚಾರ್ಯ ಪುಂಚಮೆ ವಂದಿಸಿ. ಅಮಿತ ಯು.ಎಸ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *