ಕೈಕಂಬ  : ದೈವಾಲಯ, ದೇವಸ್ಥಾನಗಳ ಜೀರ್ಣೋದ್ಧಾರದಿಂದ ಊರಿನಲ್ಲಿ ಒಂದು ಉತ್ತಮ ವಾತಾವರಣ ಸೃಷ್ಟಿಯಾಗುತ್ತಿದೆ. ಕರಾವಳಿ ಭಾಗದಲ್ಲಿ ಸಾಕಷ್ಟು ಇಂತಹ ಧಾರ್ಮಿಕ ಶ್ರದ್ಧಾ ಕೆಲಸಗಳು ನಡೆಯುತ್ತಿವೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.

21 vp shilanysa 2

ಕಂದಾವರ ಪದವಿನ ಶ್ರೀ ಕೋರ್ದಬ್ಬು-ತನ್ನಿಮಾನಿಗ ಹಾಗೂ ಪರಿವಾರ ದೈವಗಳಿಗೆ ನೂತನ ದೈವಾಲಯ ನಿರ್ಮಿಸುವ ಉದ್ದೇಶದಿಂದ ಭಾನುವಾರ ನಡೆದ ಶಿಲಾನ್ಯಾಸ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡಿದರು.

21 vp shilanysa 3

ನಂಬಿಕೆಯ ಮೇಲೆ ನಮ್ಮ ಜೀವಾಳ. ಆದ್ದರಿಂದಲೇ ನಾವು ದೈವ-ದೇವರ ಮೇಲೆ ಅಪಾರವಾದ ಭಕ್ತಿ-ಭಾವ ಹೊಂದಿದ್ದೇವೆ. ದೈವಸ್ಥಾನ, ದೇವಾಲಯ ಜೀರ್ಣೋದ್ಧಾರದ ಹಿಂದೆಯೂ ನಮ್ಮ ಬಲವಾದ ಈ ನಂಬಿಕೆ ಕೆಲಸ ಮಾಡುತ್ತಿದೆ. ಇಂತಹ ಕೆಲಸಗಳಿಂದ ಸಮಾಜದಲ್ಲಿ ಸುಭಿಕ್ಷೆ ನೆಲೆಯಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಅಭಿಪ್ರಾಯಪಟ್ಟರು.

21 vp shilanysa 6

ವೇದಿಕೆಯಲ್ಲಿ ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ, ಶೆಡ್ಡೆ ಮಂಜುನಾಥ ಭಂಡಾರಿ, ಕೈಕಂಬ ಹೋಟೆಲ್ ಉದ್ಯಮಿ ಹರಿರಾವ್ ದೀಪ ಬೆಳಗಿಸಿದರು. ದಕ ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ, ತಾಪಂ ಸದಸ್ಯರಾದ ಸಚಿನ್ ಅಡಪ, ವಿಶ್ವನಾಥ ಶೆಟ್ಟಿ ಹಾಗೂ ವಿನೋದ್ ಮಾಡ, ಹರೀಶ್ ಕೆ, ಕಾಳಪ್ಪ ಕೋಟ್ಯಾನ್, ರಾಜೀವ ಕೆ ಮೊದಲಾದವರಿದರಿದ್ದರು.

21 vp shilanysa 1

ಲಕ್ಷ್ಮೀನಾರಾಯಣ ಉಡುಪ ಸ್ವಾಗತಿಸಿದರು. ಭರತ್ ಕರ್ಕೇರ ಪ್ರಸ್ತಾವಿಕ ಮಾತನಾಡಿದರು. ಸತೀಶ್ ಶೆಟ್ಟಿ ನಿರೂಪಿಸಿದರೆ ನವೀನ್ ಕೈಕಂಬ ವಂದಿಸಿದರು.

By suddi9

Leave a Reply

Your email address will not be published. Required fields are marked *