ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಪ್ಪದ ಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ ನ.12ರಂದು ಮಂಗಳವಾರ ಬೆಳ್ಳಗೆ 9 ಗಂಟೆಯಿಂದ ಮರುದಿನ ಬುಧವಾರ ಬೆಳಗ್ಗೆ 9 ಗಂಟೆಯವರೆಗೆ ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ದೇವಳ ಅರ್ಚಕರಾದ ಮಾಧವ ಭಟ್ , ನಾರಾಯಣ ಭಟ್, ರಾಮ್ ಭಟ್ , ಅನಂತ ಭಟ್, ವಿಷ್ಣುಮೂರ್ತಿ ಭಟ್ , ಮಾಧವ ಮಯ್ಯ ಹಾಗೂ ತಾ. ಪಂ. ಸದಸ್ಯ ಯಶವಂತ ಪೂಜಾರಿ, ಕರಿಯಂಗಳ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಗ್ರಾ.ಪಂ. ಸದಸ್ಯ ಲೋಕೇಶ್ ಭರಣಿ , ಭುವನೇಶ್ ಪಚಿನಡ್ಕ, ರಾಘವ ಕೋಟ್ಯಾನ್ ಪೆರ್ಮುದೆ ಅಮ್ಮುಂಜೆಗುತ್ತು ಜೀವರಾಜ್ ಶೆಟ್ಟಿ , ಯಶೋಧರ ದೀಪ ಪ್ರಜ್ವಲನೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿಯ ವೆಂಕಟೇಶ್ ನಾವಡ, ಬಾಬುರಾವ್ , ಸೇಸಪ್ಪ, ಹರೀಶ , ನಾರಾಯಣ , ಕುಮಾರ್, ಮೋಹನದಾಸ್, ನವೀನ , ಪ್ರೀತೇಶ್ ಮತ್ತು ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
