ಕೈಕಂಬ: ಸುನ್ನಿ ಯುವ ಜನ ಸಂಘ(ಎಸ್ ವೈ ಎಫ್ ) ಇದರ ವತಿಯಿಂದ ಉಳುಹಿಯ್ಯತ್ ಹಾಗೂ ಎಸ್ ವೈ ಎಫ್ ಸಂಘದ ಕಾರ್ಯಕ್ರಮ ಕೈಕಂಬ ಮೇಘಾ ಪ್ಲಾಜಾ ಹಾಲ್ನಲ್ಲಿ ಜರಗಿತು. ಉಳುಹಿಯ್ಯತ್ ಸಂಬಂಧ ವಾದ ವಿಷಯವನ್ನು ಎಸ್ ವೈ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಮ್ ಕಾಮಿಲ್ ಸಖಾಫಿ ನೇತೃತ್ವ ವಹಿಸಿದ್ದರು. ನಂತರ ಸುನ್ನಿ ಜಂಯಿಯ್ಯತುಲ್ ಮುಹಲ್ಲಿಮೀನ್ ಕೈಕಂಬ ರೇಂಜ್ ಹೊರತಂದ “ಅನ್ನಜಾತ್ ಪೆರ್ನಾಲ್” ವಿಶೇಷಾಂಕ ಸಂಚಿಕೆಯನ್ನು ಕೈಕಂಬ ರೇಂಜ್ ಅಧ್ಯಕ್ಷರಾದ ಬದ್ರದ್ದೀನ್ ಆಝಹರಿ ,ಎಸ್ ವೈ ಎಫ್ ಕೈಕಂಬ ಕಾರ್ಯದರ್ಶಿ ಅಬ್ದುಲ್ ವೆನ್ಸ್ ಹಾಗೂ ಎಟಿಬಿ ಆಹಮ್ಮದ್ ಹಾಜಿ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು . ಸಂಪನ್ಮೂಲವ್ಯಕ್ತಿಯಾಗಿ ಅಬಿಬುರ್ರಹಮಾನ್ ಅಡ್ಡೂರು, ಹಸನ್ ಮದನಿ ಕೈಕಂಬ, ಅಬ್ದುಲ್ ರಹಿಮಾನ್ ಕೋಯ ಮಳಲಿ ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ರಿಯಾದ್ ಸಹದಿ ಕಾರ್ಯಕ್ರಮ ನಿರೂಪಿಸಿದರು.