ನವದೆಹಲಿ : ‘ಸಂಸದ್ ಆದರ್ಶ ಗ್ರಾಮ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಪ್ರತಿಯೊಬ್ಬ ಸಂಸದರು ಒಂದು ಗ್ರಾಮವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಜನ್ಮದಿನವಾದ ಇಂದು ಯೋಜನೆ ಉದ್ಘಾಟಿಸಲಾಗುತ್ತದೆ.
“ಸಂಸದ ಆದರ್ಶ ಗ್ರಾಮ ಯೋಜನೆ”
ಪ್ರಧಾನಮಂತ್ರಿಗಳು ಕೆಂಪುಕೋಟೆ ಮೇಲಿನ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಮೊದಲ ಬಾರಿ ಈ ಕುರಿತು ಘೋಷಣೆ ಮಾಡಿದ್ದರು. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಇದರ ನಿಯಮಾವಳಿಗಳನ್ನು ಸಿದ್ಧಗೊಳಿಸಿದೆ. ಈ ಪ್ರಕಾರ ಪ್ರಕಾರ ಪ್ರತಿ ಸಂಸತ್ ಸದಸ್ಯರು 2016ರೊಳಗೆ ಒಂದು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಬೇಕು. 2019ರೊಳಗೆ 2 ಗ್ರಾಮಗಳು ಮತ್ತು 2019ರಿಂದ 5 ವರ್ಷ ಅವಧಿಯಲ್ಲಿ 5 ಗ್ರಾಮಗಳನ್ನು ಮಾದರಿಯನ್ನಾಗಿಸಬೇಕು ಎಂದು ತಿಳಿಸಲಾಗಿದೆ.