ಪೊಳಲಿ:ಶ್ರೀ ಕ್ಷೇ.ಧ. ಗ್ರಾ. ಯೋ. ಬಿಸಿ ಟ್ರಸ್ಟ್ (ರಿ); ಬಂಟ್ವಾಳ, ಪೊಳಲಿ ವಲಯದ ಅಮ್ಮುಂಜೆ ಎಂಬಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ಜರಗಿತು. ಯೋಜನೆಯ ತಾಲೂಕು ಕೃಷಿ ಅಧಿಕಾರಿ ಶ್ರೀ ಜನಾರ್ಧನ ಅವರು ಬೀಜದ ಉಂಡೆ ತಾಯಾರಿ ಬಗ್ಗೆ ಮಾಹಿ ನೀಡಿದರು. ಬೀಜ ಗಳು ನಾಶವಾಗದಂತೆ ಮೊಳಕೆಯೊಡೆಯಲು ಪೂರಕ ವಾತಾವರಣ ಸೃಷ್ಟಿಯಾಗುವ ವರೆಗೆ ಪೋಷಕಾಂಶ ಯುಕ್ತ ಮಣ್ಣಿನ ಉಂಡೆಗಳ ಮೂಲಕ ರಕ್ಷಿಸಿಡುವ ವಿಧಾನವನ್ನು ತಿಳಿಸಿದರು.678fddf3-d58e-4965-85bd-d597efb075e3

ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸಪ್ನಾ ಅವರು ಕೃಷಿ ಜಾಗ ಇಲ್ಲದ ಆಸಕ್ತರಿಗೆ ತಾರಸಿಯಲ್ಲಿ ಮಲ್ಲಿಗೆ ಕೃಷಿ ಮಾಡುವ ಬಗ್ಗೆ ತಿಳಿಸಿ ಸ್ವ ಉದ್ಯೋಗ ಮಾಹಿತಿ ನೀಡಿದರು.
ಜನ ಜಾಗೃತಿ ವೇದಿಕೆ ಅಧ್ಯಕ್ಷ ಜನಾರ್ದನ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಶ್ರೀಮತಿ ವಜ್ರಾಕ್ಷಿ ಅವರ ಮನೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಶ್ರೀಧರ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.d5f21b95-c338-412f-a11c-ba40e82bf69a

ವಲಯ ಮೇಲ್ವಿಚಾರಕಿ ಶ್ರೀಮತಿ ಹರಿಣಾಕ್ಷಿ ಅವರು ಪ್ರಾಸ್ತಾವಿಕ ಮಾತನಾಡಿದರು. ಸ್ಥಳೀಯ ಕೃಷಿಕ ಬಂಧುಗಳು ಮತ್ತು ವಲಯದ ಸೇವಾ ಪ್ರತಿನಿಧಿ ಗಳು ಭಾಗವಹಿಸಿದ್ದರು. ಸೇವಾ ಪ್ರತಿನಿಧಿಗಳಾದ ಅಮಿತಾ. ಬಿ ಸ್ವಾಗತಿಸಿ ನಿರೂಪಿಸಿದರು. ರೇಖಾ ಶೆಟ್ಟಿ ವಂದಿಸಿದರು

By suddi9

Leave a Reply

Your email address will not be published. Required fields are marked *