ಕೈಕಂಬ : ಗುರುಪುರ ಜಂಕ್ಷನ್‌ನಲ್ಲಿ ಗುರುಪುರ ಸೇವಾ ಬ್ರಿಗೇಡ್ ವತಿಯಿಂದ ಸ್ವಾತಂತ್ರೋತ್ಸವ ಆಚರಿಸಲಾಯಿತು. ಬಜ್ಪೆ ವಿಮಾನ ನಿಲ್ದಾಣದ ಅಧಿಕಾರಿ ಗೋಪಾಲಕೃಷ್ಣ ಪೂಜಾರಿ ಧ್ವಜಾರೋಹಣಗೈದರು. ಪುರಂದರ ಮಲ್ಲಿ, ಸುರೇಂದ್ರ ಮಲ್ಲಿ, ಶೀನ ಕೋಟ್ಯಾನ್, ರವಿಶಂಕರ್ ರಾವ್, ರಮಾನಂದ ಶೆಟ್ಟಿ, ತನಿಯಪ್ಪ ಪೂಜಾರಿ, ಗುರುಪುರ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಸಚಿನ್ ಅಡಪ, ನಳಿನಿ ಶೆಟ್ಟಿ, ಸುನಿಲ್ ಜಲ್ಲಿಗುಡ್ಡೆ ಹಾಗೂ ಶ್ರೀಕರ ಶೆಟ್ಟಿ, ಬ್ರಿಗೇಡ್ ಪದಾಧಿಕಾರಿಗಳು, ಸೇವಾ ಕಾರ್ಯಕರ್ತರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು. ಮಧುರಾಜ್ ಗುರುಪುರ ನಿರೂಪಿಸಿ, ವಂದಿಸಿದರು.gur-aug-15-gurpur junction-1

gur-aug-15-gurpur junction-2

gur-aug-15-gurpur junction-3

By suddi9

Leave a Reply

Your email address will not be published. Required fields are marked *