ಬಂಟ್ವಾಳ: ಬ್ರಹ್ಮರಕೂಟ್ಲು ಸಮೀಪದ ಜ್ಯೋತಿಗುಡ್ಡೆ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಪ್ರಾಂಗಣದಲ್ಲಿ ನೃತ್ಯಾಂಜಲಿ ಭರತನಾಟ್ಯ ತರಗತಿ ಶುಭಾರಂಭಗೊಂಡಿತು ಜ್ಯೋತಿಗುಡ್ಡೆ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷೆ ಗುಲಾಬಿ ಅಮ್ಮ ದೀಪಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿದ್ದ ನೃತ್ಯ ವಿದೂಷಿ ಸುಮಂಗಳ ರತ್ನಕರ್ ಮಾತನಾಡಿ ಕಲಿಯುವಿಕೆಗೆ ವಯಸ್ಸಿನ ಮಿತಿ ಇರುವುದಿಲ್ಲ. ತನಗೆ ಏನು ಗೊತ್ತಿಲ್ಲ ಎನ್ನುವ ಭಾವದಲ್ಲಿ ಕಲಿತಾಗ ಯಾವುದೇ ವಿಚಾರಗಳು ನಮಗೆ ಬೇಗನೆ ದಕ್ಕುತ್ತದೆ ಎಂದರು. ದೇವಸ್ಥಾನದ ಕಾರ್ಯದಶರ್ಿ ನಾರಾಯಣ ನಾಯ್ಕ್, ತರಿಕಿಟ ಕಲಾ ಕಮ್ಮಟದ ಸಹ ನಿದರ್ೇಶಕಿ ವಾಣಿ ಪೆರಿಯೋಡಿ, ಪ್ರಮುಖರದ ಜನಾರ್ದನ ಜ್ಯೋತಿಗುಡ್ಡೆ, ಬಾಬು ಪೂಜಾರಿ ಜ್ಯೋತಿಗುಡ್ಡೆ ಉಪಸ್ಥಿತರಿದ್ದರು. ಪ್ರತೀ ಭಾನುವಾರ ಜ್ಯೋತಿಗುಡ್ಡೆ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಲಿದ್ದು ಆಸಕ್ತರು ಸಂಪಕರ್ಿಸಬಹುದಾಗಿದೆ.