ಕೈಕಂಬ : ಕೊರೊನಾ ಮಹಾಮಾರಿಯಿಂದಾಗಿ ಕಳೆದ ಸುಮಾರು ೨೦ ತಿಂಗಳ ಸುದೀರ್ಘ ಅವಧಿಯಲ್ಲಿ ಮುಚ್ಚಲ್ಪಟ್ಟಿದ್ದ ಪುಟಾಣಿಗಳ ಅಂಗನವಾಡಿ ಕೇಂದ್ರಗಳು ಸರ್ಕಾರದ ಮಾರ್ಗಸೂಚಿಯಂತೆ ಸೋಮವಾರ ಪುನಾ ತೆರೆಯಲ್ಪಟ್ಟವು.
ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಸೈಟ್‌ನ ಅಂಗನವಾಡಿ ಕೇಂದ್ರಕ್ಕೆ ಪೋಷಕರೊಂದಿಗೆ ಆಗಮಿಸಿದ ಪುಟಾಣಿಗಳನ್ನು ಪಂಚಾಯತ್ ಸದಸ್ಯರಾದ ಸಚಿನ್ ಅಡಪ, ರಾಜೇಶ್ ಸುವರ್ಣ ಹಾಗೂ ಅಂಗನವಾಡಿ ಶಿಕ್ಷಕಿ ಭಾರತಿಯವರು ಹೂಮಳೆ ಗರೆಯುವುದರೊಂದಿಗೆ ಸ್ವಾಗತಿಸಿದರು. ಬಳಿಕ ಎಲ್ಲ ಮಕ್ಕಳಿಗೆ ದೀಪಾವಳಿ ಶುಭಾಶಯ ಬಯಸಿ, ಸಿಹಿ ತಿಂಡಿ ವಿತರಿಸಲಾಯಿತು
