ಕೈಕಂಬ: ಸ್ವಂತಕ್ಕೆ ಅಲ್ಪ ಸಮಾಜಕ್ಕೆ ಸರ್ವಸ್ವ ತ್ವತ್ವಕ್ಕೆ ಮಾದರಿ ಉಮನಾಥ ಗೌಡರು ಎಂದು ಸಂಸದ ನಳೀನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು.
ಅವರು ಎಡಪದವು ಬ್ರಹ್ಮಶ್ರೀ ನಾರಯಣಗುರು ಮಂದಿರದಲ್ಲಿ ಬುಧವಾರ ನಡೆದ ಇತ್ತೀಚಿಗೆ ನಿಧನರಾದ ಆರ್ಎಸ್ಎಸ್ ಮುಖಂಡ ವೈ ಉಮನಾಥ ಗೌಡರಿಗೆ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ತತ್ವ ಸಿದ್ಧಾಂತಗಳನ್ನು ಚಾಚುಪ್ಪದೇ ಪಾಲಿಸಿದ ಅಪ್ಪಟ ಸೇವಕ.ನಮಗೆಲ್ಲ ಗುರುಗಳಾಗಿ,ದಿನದ 24 ಘಂಟೆಗಳನ್ನು ಸಂಘಕ್ಕೆ ಮೀಸಲಿಟ್ಟ ಅವರು ಸಂಸಾರದ ಬಗ್ಗೆ ಚಿಂತಿಸುವ ಬದಲು ಸಮಾಜದ ಬಗ್ಗೆ ಚಿಂತಿಸಿದರು.ಜಿಲ್ಲೆಯಲ್ಲಿ ಉಳಿದಿರುವುದು 5 ಬಾಲಮಂದಿರಗಳು,ಅದರಲ್ಲಿ ಒಂದು ಇವರು ಪ್ರಾರಂಭಿಸಿದ್ದು ಎಂದರು.
ಪ್ರಾಂತ ಸಹಸಂಚಾಲಕ ವಾಮನ್ ಶೆಣೈ ಮತನಾಡಿ ಸಂಘದ ಚಿಂತನೆಗಳನ್ನು ಮೈಗೂಡಿಸಿಕೊಂಡು,ಅವಿರತವಾಗಿ ಗುರುಪುರ ತಾಲೂಕಿನಾದ್ಯಾಂತ ಸಂಚರಿಸಿ ಸಂಘವನ್ನು ಬಲಿಷ್ಟಗೊಳಿಸಿದವರು ಉಮನಾಥರು.ಅವರ ಪ್ರಚಾರವಿಲ್ಲದ ಕೆಲಸ ಕಾರ್ಯಗಳು ಯುವ ಜನತೆಗೆ ಮಾದರಿ ಎಂದರು.
ಈ ಸಂದರ್ಭ ಆರ್ ಎಸ್ ಎಸ್ ವಿಭಾಗ ಕಾರ್ಯಕಾರಿಣಿ ಸದಸ್ಯ ಮಧುಕರ್, ಮಂಗಳೂರು ವಿಭಾಗ ಪ್ರಚಾರಕ್ ಚಂದ್ರಬಾಬು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಿವೇಕಾನಂದ ಕಾಮತ್,ಜಿಲ್ಲಾ ಪ್ರಚಾರಕ್ ಉಮೇಶ್, ಜಿಲ್ಲಾ ವ್ಯವಸ್ಥಾ ಪಕ ಪ್ರಮುಖ್ ನಟರಾಜ್ ,ಜಿಲ್ಲಾ ಸೇವಾ ಪ್ರಮುಖ್ ಗಂಗಾಧರ್,ತಾಲೂಕು ಕಾರ್ಯವಾಹ ಪುರುಷೋತ್ತಮ ಮಳಲಿ,ಶಾಸ್ತಾವು ಶ್ರೀಭೂತನಾಥೇಶ್ವರ ದೇವಸ್ಥಾನ ಟ್ರಸ್ಟಿ ಪ್ರೇಮಲತಾ ಶೆಟ್ಟಿ,ಬಿಜೆಪಿ ಪ್ರಧಾನ ಕಾರ್ಯದಶರ್ಿ ಎನ್ ಮುರಳೀಧರ ಶೆಟ್ಟಿ,ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಗೌಡ,ವಕೀಲ ವಿಜಯ ಗೌಡ ಶಿಬ್ರಿಕೆರೆ,ಪ್ರಸಾದ್ ಹೊಸವಕ್ಕಲು ಮುಂತಾದವರು ಉಪಸ್ಥಿತರಿದ್ದರು.