ಸುದ್ದಿ9 ಕೈಕಂಬ: “ತಮ್ಮ ಜಮೀನಿನ ಪಹಣಿ ಪತ್ರವನ್ನು ಪ್ರತಿ ಆರು ತಿಂಗಳಿಗೊಮ್ಮೆ ಪಡೆದು ಪರಿಶೀಲನೆ ಮಾಡುವುದು ಬಹಳ ಅಗತ್ಯ, ಪ್ರತಿಯೊಬ್ಬರು ಕಾನೂನಿನ ಅರಿವು ಪಡೆಯಬೇಕು, ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ವದ್ದು ಎಂದು ಮಂಗಳೂರಿನ ಖ್ಯಾತ ಸಿವಿಲ್ ವಕೀಲರಾದ ಶ್ರೀ ಸಂತೋಷ ಪೀಟರ್ ಡಿ’ಸೋಜ ಹೇಳಿದರು.


ಅವರು ನೇಸರ ಕೇಂದ್ರೀಯ ಸಮನ್ವಯ ಸಮಿತಿ ಹಾಗೂ ದಿಶಾ ಟ್ರಸ್ಟ್ (ರಿ)ಕೈಕಂಬ ಇವರ ಜಂಟಿ ಆಶ್ರಯದಲ್ಲಿ ದಿಶಾ ಕಚೇರಿಯಲ್ಲಿ ನಡೆದ ಭೂ ನೋಂದಾಣಿ ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಕಾರ್ಯಗಾರದ ಸಭಾಧ್ಯಕ್ಷತೆಯನ್ನು ನೇಸರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ನೋಬರ್ಟ್ ಸಿಕ್ವೇರಾ ಕಂದಾವರ ವಹಿಸಿದ್ದರು, ದಿಶಾ ಟ್ರಸ್ಟ್‍ನ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜ ನೇಸರ ಕೇಂದ್ರ ಸಮಿತಿಯ ಕಾರ್ಯದರ್ಶಿ ಜ್ಯೋತಿ ಲೂಯಿಸ್, ಜತೆ ಕಾರ್ಯದರ್ಶಿ ಶಿವರಾಮ ಶೆಟ್ಟಿ ಮಲ್ಲೂರು, ಉಪಾಧ್ಯಕ್ಷರಾದ ರಮೇಶ್ ಹೆಗ್ಡೆ ಬೆಳ್ಳಿಬೆಟ್ಟು ಉಪಸ್ಥಿತರಿದ್ದರು.