ಸುದ್ದಿ9 ಕೈಕಂಬ; ಬೆಳ್ಳೂರು ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ವತಿಯಿಂದ ಶ್ರೀ ಅಂಬಿಕಾ ಅನ್ನಪೂಣರ್ೇಶ್ವರೀ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇದರ 9ನೇ ವರ್ಷದ ಯಕ್ಷಗಾನ ಬಯಲಾಟವು ಎ.6 ಭಾನುವಾರ ಬಟ್ಟಾಜೆಯಲ್ಲಿ ಜರಗಿತು. ಬೆಳಗ್ಗೆ ವೇದಾನಂದ ಕಾರಂತರ ಉಪಸ್ಥಿತಿಯಲ್ಲಿ ಕಾಂತಪ್ಪ ಬಂಗೇರಾ ಅವರು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.ಈ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಲಾಯಿತು.

ಕ್ರೀಡಾಪಟು ಕು. ಶಿಲ್ಪ ಮತ್ತು ನಾಟಿ ವೈದ್ಯ ಕೂರಿಯಾಳ ನಾಗಪ್ಪ ಪೂಜಾರಿ ಹಾಗೂ ಹಿರಿಯ ಯಕ್ಷಗಾನ ಕಲಾವಿದರಾದ ಚಿದಂಬರಬಾಬು ಮತ್ತು ಆನಂದ ಯು. ಅವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಜಗದೀಶ್ ಆಳ್ವ ವಹಿಸಿದ್ದರು ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ದೇವಪ್ಪ ಪೂಜಾರಿ ಬಾಳಿಕೆ,ವೇದಾನಂದಕಾರಂತ, ಉದ್ಯಮಿ ಕ್ರಷ್ಣಪ್ಪಪೂಜಾರಿ ನಾಸಿಕ್ ರಮೇಶ್ ಪೂಜಾರಿ ಬಟ್ಟಾಜೆ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು. ನಂತರ ಬ್ರಹ್ಮಮುಗೇರೆರ್ ತುಳು ಯಕ್ಷಗಾನ ಬಯಲಾಟ ನಡೆಯಿತು.





