ಧರ್ಮಸ್ಥಳ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗುಜರಾತ್ ರಾಜ್ಯದ ನಡಿಯಾಡ್‍ನಲ್ಲಿರುವ ಜೆ.ಎಸ್. ಆಯುರ್ವೇದ ಕಾಲೇಜು ಮತ್ತು ಪಿ.ಡಿ. ಪಟೇಲ್ ಆಯುರ್ವೇದ ಆಸ್ಪತ್ರೆಯ ವತಿಯಿಂದ ಮಂಗಳವಾರ ವೈದ್ಯ ಸುಂದರಲಾಲ್ ಜೋಶಿ ಸ್ಮಾರಕ ಪುರಸ್ಕಾರ ನೀಡಿ ಗೌರವಿಸಲಾಯಿತು.

ಆಯುರ್ವೇದ ಚಿಕಿತ್ಸಾ ಪದ್ಧತಿ ಕ್ಷೇತ್ರದಲ್ಲಿ ಶ್ರೀ ಹೆಗ್ಗಡೆಯವರು ಸಲ್ಲಿಸಿದ ಗಣನೀಯ ಸೇವೆಯನ್ನು ಮನ್ನಿಸಿ ಈ ಪುರಸ್ಕಾರ ನೀಡಲಾಗಿದೆ.