ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಮತ್ತು ಎ.ಬಿ.ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ದೇರಳಕಟ್ಟೆ ಇದರ ವತಿಯಿಂದ ತುಂಬೆ ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳ ದಂತ ತಪಾಸಣಾ ಶಿಬಿರವು ಶಾಲಾ ವಠಾರದಲ್ಲಿ ಜರಗಿತು.

KAR_0404ಈ ಸಂದರ್ಭದಲ್ಲಿ ಡೆಂಟಲ್ ಕಾಲೇಜಿನ ಡಾ.ಲಕ್ಷ್ಮೀರಮೇಶ್ , ಡಾ.ಕಾವ್ಯಾ ಶೆಟ್ಟಿ , ಡಾ.ಅಕ್ಷತಾ ಗಡಿಯಾರ್, ಭೂ ಅಭಿವೃದ್ಧಿ ಬ್ಯಾಂಕ್ ನ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಶೋಕ್ ತುಂಬೆ , ಪ್ರಭಾಕರ ಆಚಾರ್ಯ ರಾಮಲ್ ಕಟ್ಟೆ , ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಬಾಬು , ಸೋಮಪ್ಪ ಕೋಟ್ಯಾನ್ , ಚಂದ್ರಹಾಸ್ ತುಂಬೆ , ಮುಖ್ಯೋಪಾಧ್ಯಾಯಿನಿ ಪ್ರಸನ್ನ ವಿ., ಸೇವಾಂಜಲಿ ಟ್ರಸ್ಟಿ ಕೆ.ಕೆ.ಪೂಂಜ , ವೆಂಕಟರಮಣ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *