ಬಂಟ್ವಾಳ: ರಾಷ್ಟ್ರ ಕಟ್ಟುವ ಕಲ್ಪನೆಯ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ನವೋದಯ ಯುವಕ ಸಂಘ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದೆ ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು . ಅವರು ನವೋದಯ ಯುವಕ ಸಂಘ(ರಿ). ಮೈರನ್ಪಾದೆ ಕಾಮಾಜೆ ಇದರ 26ನೇ ವಾರ್ಷಿಕೊತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

00030

ನವೋದಯ ಯುವಕ ಸಂಘ ಈ ದೇಶದ ಸಂಸ್ಕಾರ, ಸಂಸ್ಖೃತಿ ಮತ್ತು ಸಂಘಟನೆಗೊಸ್ಕರ ತಮ್ಮ ಸೇವೆಯನ್ನು ಮಾಡಿದೆ, ಅ ಮೂಲಕ ಸಮಾಜದ ಎಲ್ಲಾ ವರ್ಗಗಳ ಪ್ರೀತಿ ಪಾತ್ರವನ್ನು ಪಡೆದು 26 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು.  ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ , ಬಿ.ಜೆ.ಪಿ.ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು   ಲಯನ್ಸ್ ಜಿಲ್ಲೆ ಪ್ರಾಂತೀಯ ಅಧ್ಯಕ್ಷ ಲಯನ್ ದಾಮೋದರ ಬಿ.ಎಂ. ಪುರಸಭಾ ಸದಸ್ಯರಾದ ಬಾಸ್ಕರ್ ಟೈಲರ್ ಕಾಮಾಜೆ , ದೇವದಾಸ ಶೆಟ್ಟಿ ಮತ್ತು ನವೋದಯ ಯುವಕ ಸಂಘದ ಅಧ್ಯಕ್ಷ  ಜಗದೀಶ ಕಾಮಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕಲಿಕೆಯಲ್ಲಿ ಸಾಧನೆ ಮಾಡಿದ  ಕು. ನಮಿತ ಆರ್ ಕಾಮಾಜೆ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.  ಧನರಾಜ್ ಕಾಮಾಜೆ ಸ್ವಾಗತಿಸಿ  ಬಾಲಕೃಷ್ಣ ವಂದಿಸಿದರು. ಸುದೀರ್ ಕಾಮಾಜೆ ಪ್ರಸ್ತಾವಿಸಿದರು.

By suddi9

Leave a Reply

Your email address will not be published. Required fields are marked *