ಬಂಟ್ವಾಳ: ತಾಲೂಕಿನ ಕೊಳ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಯಾಗಿ ಸಾಲೆತ್ತೂರು ಪಂಚಾಯತ್ ಸದಸ್ಯ ನಾರಾಯಣ ಪೂಜಾರಿ ಅವರು ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಹಾಲಿ ಸದಸ್ಯ ಎಂ.ಎಸ್.ಮಹಮ್ಮದ್ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಪ್ರಕಟಿಸಿದೆ. ನಾರಾಯಣ ಪೂಜಾರಿ ಅವರು ಈ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದರು. ತನ್ನನ್ನು ಅಭ್ಯರ್ಥಿ ಯನ್ನಾಗಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಿದ್ದರು.

KAR_8157

 

5btl-Mani

KAR_8014

KAR_8016

KAR_8021

KAR_8024

KAR_8035

KAR_8037

KAR_8105

KAR_8122

KAR_8135

ಆದರೆ ಪಕ್ಷ ಎಂ.ಎಸ್.ಮಹಮ್ಮದ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು ಇದರಿಂದ ಅಸಮಾಧಾಧನಗೊಂಡಿರುವ ನಾರಾಯಣ ಪೂಜಾರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.  ಉಳಿದಂತೆ ಸಜಿಪಮುನ್ನೂರು ಕ್ಷೇತ್ರದಿಂದ ಚಂದ್ರಪ್ರಕಾಶ್ ಶೆಟ್ಟಿ(ಕಾಂಗ್ರೆಸ್),ಪದ್ಮನಾಭ ಕೊಟ್ಟಾರಿ,( ಬಿಜೆಪಿ),ಹಂಝ,ಇಬ್ರಾಹಿಂ ಅಹಮದ್(ಎಸ್ಡಿಪಿಐ), ಶಶಿಕಿರಣ್(ಪಕ್ಷೇತರ), ಶರತ್ ಕುಮಾರ್(ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ),ಪುದು ಜಿ.ಪಂ.ಕ್ಷೇತ್ರದಿಂದ ಉಮ್ಮರ್ ಫಾರೂಕ್(ಕಾಂಗ್ರೆಸ್), ರವೀಂದ್ರ ಕಂಬಳಿ(ಬಿಜೆಪಿ), ಸಂಗಬೆಟ್ಟು ಜಿ.ಪಂ.ಕ್ಷೇತ್ರಕ್ಕೆ ವಸಂತ ಶೆಟ್ಟಿ ಕೇದಗೆ(ಪಕ್ಷೇತರ), ಹರೀಶ್ ಆಚಾರ್ಯ, ಕುರ್ನಾಡು-ಶಕೀಲ(ಬಿಜೆಪಿ), ಮಾಣಿ-ಧರ್ಮಾವತಿ(ಬಿಜೆಪಿ), ಗೋಳ್ತಮಜಲು-ಯಶೋಧ(ಬಿಜೆಪಿ), ಭಾರತಿ(ಕಾಂಗ್ರೆಸ್), ಪುಣಚ-ವಿಶಾಲಾಕ್ಷಿ(ಕಾಂಗ್ರೆಸ್), ರೇವತಿ(ಬಿಜೆಪಿ) ಸೇರಿದಂತೆ 18 ಮಂದಿ ಶನಿವಾರ ನಾಮಪತ್ರ ಸಲ್ಲಿಕೆಯಾಗಿದೆ.ಇದೇ ಮೊದಲ ಬಾರಿಗೆ ರೈತ ಸಂಘದ ಹೆಸರಿನಲ್ಲಿ ಶರತ್ ಕುಮಾರ್ ಎಂಬವರು ಸಜಿಪಮುನ್ನೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಯಾಗಿರುವುದು ವಿಶೇಷವಾಗಿದೆ. ಹಾಗೆಯೇ ಬಂಟ್ವಾಳ ತಾಲೂಕು ಪಂಚಾಯತ್ಗೆ ಶನಿವಾರ ಒಟ್ಟು 46 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕಾಂಗ್ರೇಸ್ 22, ಬಿಜೆಪಿ 18,ಜೆಡಿಎಸ್.1, ಎಸ್ಡಿಪಿಐ 2, ಸಿಪಿಐ(ಎಂ) 1 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿದೆ.
ಭಾನುವಾರ ರಜಾದಿನವಾಗಿದ್ದು,ಸೋಮವಾರ ಕೊನೇ ದಿನವಾಗಿರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಹೆಚ್ಚಾಗುವ ನಿರೀಕ್ಷೆ ಇದೆ.

ಬಂಟ್ವಾಳ: ತಾಲೂಕು ಪಂಚಾಯತ್ಗೆ ಕಾಂಗ್ರೆಸ್ 34 ರ ಪೈಕಿ 19 ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ವಿವರ ಲಭ್ಯವಾಗಿದೆ. ಉಳಿದಂತೆ 15 ಕ್ಷೇತ್ರಗಳ ಸಂಭಾವ್ಯಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದ್ದು ಸೋಮವಾರ ಬೆಳಗ್ಗೆ ಬಿಡುಗಡೆಗೊಳಿಸಲಾಗುವುದೆಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ ತಿಳಿಸಿದ್ದಾರೆ.
ಸಂಗಬೆಟ್ಟು- ಪ್ರಭಾಕರ ಪ್ರಭು, ಚೆನ್ನೈತ್ತೋಡಿ-ರತ್ನಾವತಿ, ಪಿಲಾತಬೆಟ್ಟು-ರಾಜೀವ ಶೆಟ್ಟಿ,ರಾಯಿ- ಮಂಜುಳಾ ಸದಾನಂದ, ಪಂಜಿಕಲ್ಲು- ಪದ್ಮಾವತಿ ಬಿ.ಪೂಜಾರಿ,ಆಮ್ಟಾಡಿ- ಮಲ್ಲಿಕಾ ವಿ.ಶೆಟ್ಟಿ, ಕಾವಳಮೂಡೂರು-ಧನಲಕ್ಷ್ಮೀ, ಉಳಿ-ಬೇಬಿ, ಕರಿಯಂಗಳ-ರಾಜು ಕೋಟ್ಯಾನ್, ಅಮ್ಮುಂಜೆ-ಶಿವಪ್ರಸಾದ್, ನರಿಕೊಂಬು-ಗಾಯತ್ರಿ, ಸಜಿಪಮುನ್ನೂರು-ನಜೀಮಾ ಬೇಗಂ, ಕಡೇಶ್ವಾಲ್ಯ-ಸುಂದರ, ಬಾಳ್ತಿಲ-ಚಂದ್ರಕಲಾ, ವೀರಕಂಭ-ಜಯಂತಿ, ಸಜಿಪಮೂಡ-ಸಂಜೀವ ಪೂಜಾರಿ, ಮಾಣಿ-ಮಂಜುಳಾ, ಕೆದಿಲ-ಆದಂ ಕುಂಞ, ವಿಟ್ಲಪಡ್ನೂರು-ಶೋಭಾ ರೈ.
ಗೋಳ್ತಮಜಲು ಕ್ಷೇತ್ರಕ್ಕೆ ವಾಗ್ವಾದ
ಗೋಳ್ತಮಜಲು ತಾ.ಪಂ.ಕ್ಷೇತ್ರಕ್ಕೆ ಹಾಲಿ ಸದಸ್ಯೆ ಐಡಾ ಸುರೇಶ್ ಅವರು ಸಚಿವ ರೈ ಅವರ ಸೂಚನೆಯ ಮೇರೆಗೆ ಶನಿವಾರ ನಾಮಪತ್ರ ಸಲ್ಲಿಸಲು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ವೇಳೆ ಸಚಿವರ ಬಿ.ಸಿ.ರೋಡಿನ ಕಛೇರಿ ಆವರಣದಲ್ಲಿ ಅಲ್ಪಸಂಖ್ಯಾತ ಘಟಕದ ಕಲ್ಲಡ್ಕ ನಿವಾಸಿ ಕಾಂಗ್ರೆಸ್ ಮುಖಂಡರೊಬ್ಬರು ಆಕ್ಷೇಪ ಎತ್ತಿದ್ದರಿಂದ ಕೆಲ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಕಾಂಗ್ರೆಸ್ ಮುಖಂಡ ಐಡಾ ಅವರಿಗೆ ನಾಮಪತ್ರ ಸಲ್ಲಿಕೆಗೆ ತಗಾದೆ ತೆಗೆಯುತ್ತಿದ್ದಂತೆ ಐಡಾ ಅವರ ಬೆಂಬಲಿಗರು ಇದಕ್ಕೆ ಆಕ್ಷೇಪಿಸಿದರು.ಈ ಸಂದರ್ಭದಲ್ಲಿ ಇವರುಳಗೆ ಮಾತಿ ನ ಚಕಮಕಿಯು ನಡೆಯಿತಲ್ಲದೇ ಒಂದು ಹಂತದಲ್ಲಿ ಕಾಂಗ್ರೆಸ್ ಮುಖಂಡನಿಗೆ ಐಡಾ ಬೆಂಬಲಿಗರು ಹಲ್ಲೆಗೂ ಮುಂದಾದರು. ಆಗ ಸ್ಥಳದಲ್ಲಿದ್ದ ಕಾಂಗ್ರೆಸ್ ನಾಯಕರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ವಿದ್ಯಮಾನದಿಂದ ಮುನಿಸಿಕೊಂಡ ಐಡಾ ಅವರು ನಾಮಪತ್ರ ಸಲ್ಲಿಸದೇ ತನ್ನ ಬೆಂಬಲಿಗರೊಂದಿಗೆ ವಾಪಾಸಾದರು.

By suddi9

Leave a Reply

Your email address will not be published. Required fields are marked *